ಚಿತ್ಪಾವನ ಮಹಿಳೆಯ ದೈನಂದಿನ ಬದುಕು
ಈ ಎಲ್ಲ ಉಲ್ಲೇಖಗಳಿಂದ ಕಂಡು ಬರುವ ಮಹತ್ವದ ಅಂಶವೇನೆಂದರೆ ಕರ್ಮೇಂದ್ರಿಯಗಳ ಮೂಲಕ ಕರ್ಮಾಚರಣೆ, ಜ್ಞಾನೇಂದ್ರಿಯಗಳ ಮೂಲಕ ದೇವಭಕ್ತಿಗೆ ಭೂಮಿಕೆಯಾಗಿ ಮನಸ್ಸನ್ನು ಪರಿವರ್ತಿಸಿ, ಮನಸ್ಸನ್ನು ಬುದ್ಧಿಯ ನಿಯಂತ್ರಣಕ್ಕೊಳಪಡಿಸಿ ತನ್ಮೂಲಕ ಮನೋಬಲವನ್ನು ಸಂಪಾದಿಸಿ ನಿರಂತರ ಭಗವಂತನ ನಾಮಸ್ಮರಣೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು. ವಿಶೇಷವಾಗಿ ತನ್ನ ಸ್ವಂತಕ್ಕೇನೂ ಬಯಸದೆ ನಿಸ್ಪೃಹತೆಯಿಂದ ತ್ಯಾಗಮಯಿಯಾಗಿ ಕುಟುಂಬ ಸೌಖ್ಯವನ್ನು ಹೊಂದುವಲ್ಲಿ ತ್ರಿಕರಣಪೂರ್ವಕವಾದ ಶ್ರದ್ಧಾ ಭಕ್ತಿಗಳಿಂದ ಗೃಹಸ್ಥಾಶ್ರಮ ಧರ್ಮವೆಂಬ ಮಹಾಯಜ್ಞದಲ್ಲಿ ಪತಿಗೆ ಅನುಕೂಲೆಯಾಗಿ, ಸಹಧರ್ಮಿಣಿಯಾಗಿ ಜೀವನ ಪರ್ಯಂತ ಪತಿಯೊಂದಿಗಿದ್ದು ಕೊನೆಯಲ್ಲಿ ಮುತ್ತೈದೆಯಾಗಿ ಮರಣವನ್ನು ಬಯಸುವುದು ಅಂದಿನ ಚಿತ್ಪಾವನ ಮಹಿಳೆಯ ಸಮರ್ಪಣಾ ಮನೋಭಾವವನ್ನು ತೋರಿಸುತ್ತದೆ. ಇದು ಭಗವದ್ಗೀತೆಯಲ್ಲಿ ಹೇಳಿದ ಜ್ಞಾನ ಯೋಗ, ಭಕ್ತಿಯೋಗ, ಕರ್ಮ ಯೋಗಗಳ ಅನುಷ್ಠಾನವೇ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಚಿತ್ಪಾವನ ವಲಸೆ
ಭಾಷಿಕ ಮತ್ತು ಜನಾಂಗೀಯ ಅಧ್ಯಯನದ ದೃಷ್ಟಿಯಿಂದ ಕರ್ನಾಟಕದ ಕರಾವಳಿ ಅದರಲ್ಲೂ ದಕ್ಷಿಣ ಕನ್ನಡ (ಕಾಸರಗೋಡು ಸಹಿತ) ತುಂಬ ವಿಶಿಷ್ಟವಾಗಿದ್ದು ಹಲವಾರು ಮಹತ್ವದ ವಿದ್ಯಮಾನಗಳಿಂದ ಕೂಡಿದೆ. ಬಹುಭಾಷಾ ಪ್ರಾಚುರ್ಯದ ದೃಷ್ಟಿಯಲ್ಲಿ ಆಧುನಿಕ ಮಹಾನಗರಗಳನ್ನು ಬಿಟ್ಟರೆ, ದೇಶದಲ್ಲೇ ಇದೊಂದು ಸಮೃದ್ಧ ಪ್ರದೇಶ, ಒಂದು ಮಾದರಿ ಪ್ರದೇಶವೂ ಹೌದು. ದಕ್ಷಿಣಕನ್ನಡವೆಂಬ ಹೆಸರನ್ನೂ, ಕನ್ನಡ ಸಾಹಿತ್ಯ ಪರಂಪರೆ, ಕನ್ನಡದ ಕೆಲಸಗಳಲ್ಲಿ ಹಿರಿದಾದ ಸ್ಥಾನವನ್ನು ಹೊಂದಿದ್ದರೂ, ಈ ಪ್ರದೇಶದ ಬಹು ಸಂಖ್ಯಾತ ಭಾಷೆ ಕನ್ನಡವಲ್ಲ ಎಂಬುದು ಕೌತುಕದ ಸಂಗತಿ. ಈ ನೆಲೆಯಲ್ಲಿ ಗಣಿಸಿದಾಗ, ಕನ್ನಡದ ಸಾಹಿತ್ಯ ಸಂಸ್ಕೃತಿಗಳಿಗೆ ಈ ಪ್ರದೇಶದ ಕೊಡುಗೆ ಒಂದು ಅದ್ಭುತವಾಗಿಯೇ ಕಾಣುತ್ತದೆ. ದೇಶದ ಹಲವೆಡೆ ಇಲ್ಲದ 'ಜಾತಿಗೊಂದು ಭಾಷೆ' ಎಂಬ ನಿಯಮ (ಎಲ್ಲ ಅಲ್ಲವಾದರೂ) ಬಹಳ ಸಂದರ್ಭಗಳಿಗೆ ಅನ್ವಯವಾಗುತ್ತದೆ. ಬಹು ಜನಾಂಗೀಯತೆ, ಬಹು ಭಾಷಿಕತೆಗಳು ನಮ್ಮೀ ಪ್ರದೇಶಕ್ಕೆ ಸಮಸ್ಯೆಗಳಾಗಲೇ ಇಲ್ಲ. ಅವು ಜೀವನದ ಅತ್ಯಂತ ಸಹಜವಾದ ಅಂಶಗಳು ಎಂಬಂತೆ ಅಂಗೀಕೃತವಾಗಿವೆ. ನಾಲ್ಕಾರು ಭಾಷೆಗಳು ಮುಖ್ಯವಾಗಿ ವ್ಯವಹಾರದಲ್ಲಿದ್ದರೂ ಭಾಷಾವೈಷಮ್ಯ, ಘರ್ಷಣೆಗಳ ದಾಖಲೆಯೇ ಈ ಪ್ರದೇಶಕ್ಕಿಲ್ಲ ಎಂಬುದು ಮಹತ್ವದ ಸಂಗತಿ. ಬಹುಭಾಷಾ ಪದ್ಧತಿಯನ್ನು ಇಲ್ಲಿಯ ಜನ ಸಹಜವಾಗಿ, ಸರಳವಾಗಿ ಅಂಗೀಕರಿಸಿ ಆಚರಿಸುವ ಒಂದು ಕ್ರಮ ಮಾದರಿಯಾಗಬಲ್ಲ ಸಂಗತಿ. ಈ ಪ್ರದೇಶದ ಭಾಷಾ ಸಾಮರಸ್ಯ, ಭಾಷಿಕ-ರಾಜಕೀಯ ವೈಷಮ್ಯ, ವಿರೋಧಗಳ ಒಟ್ಟು ರಾಷ್ಟ್ರೀಯ ಸಂದರ್ಭಕ್ಕೆ ಒಂದು ಪರಿಹಾರವನ್ನು ದಿಗ್ದರ್ಶನ ಮಾಡುವಂತಿದೆ. ವಿಭಿನ್ನ ಭಾಷೆಗಳನ್ನಾಡುವ ಜನ, ಕನ್ನಡವನ್ನು ಮುಖ್ಯ ಭಾಷೆಯಾಗಿ ಅಂಗೀಕರಿಸಿ, ಆ ಪ್ರದೇಶದ ಜೀವನ, ಸಂಸ್ಕೃತಿಗಳನ್ನು ಶತಮಾನಗಳ ಕಾಲಕಾಪಾಡಿಕೊ ಡು ವನ, ಸಂಸ್ಕೃತಿಗಳನ್ನು ಶತಮಾನಗಳ ಕಾಲ ರೂಪಿಸುತ್ತ ಬಂದಿದ್ದಾರೆ. ಇದರಿಂದ ಇಲ್ಲಿಯ ಬದುಕು, ಸಾಹಿತ್ಯ, ಸಾಮಾಜಿಕ ಜೀವನ, ರೀತಿನೀತಿಗಳು, ಚಾರಿತ್ರಿಕ ಘಟನಾವಳಿಗಳು, ಉಡುಪು-ತೊಡುಪು, ಪಾಕಪದ್ಧತಿ, ಕಲಾಪ್ರಕಾರಗಳು ಮುಂತಾದ ಎಲ್ಲ ಸಂಗತಿಗಳಿಗೆ ಅನ್ಯತ್ರ ದುರ್ಲಭವಾದ ಸಂಕೀರ್ಣತೆ, ಸೊಬಗು, ಆಳ, ಹರಹುಗಳು ಒದಗಿ ಬಂದಿವೆ. ಹಾಗೆಯೇ ಇಲ್ಲಿಯ ಜನಜೀವನದಲ್ಲಿ ಕಂಡು ಬರುವ ಪರಿಶ್ರಮ, ಸಾಹಸ ಪ್ರವೃತ್ತಿ, ಚುರುಕು ವಿದ್ಯಾಪ್ರೇಮಗಳಿಗೂ ಕಾರಣವಾಗಿದೆ. ಬಹುಭಾಷಾ ಸಮುದಾಯದ ಜೀವನ, ವ್ಯಕ್ತಿಯ ಬೆಳವಣಿಗೆಗೆ ಎಷ್ಟೊಂದು ಪೋಷಕವೆಂಬ ವಿಚಾರಕ್ಕೆ ಇಲ್ಲಿಯ ಜನಜೀವನ ವಿಪುಲ ದೃಷ್ಟಾಂತಗಳನ್ನು ಒದಗಿಸುತ್ತದೆ.
ಬ್ರಹ್ಮೀಭೂತ ಯೋಗೇಶ್ವರಾನಂದತೀರ್ಥ (ತ್ರ್ಯಂಬಕ ಶಾಸ್ತ್ರಿ ಭಾಸ್ಕರ ಶಾಸ್ತ್ರಿ ಖರೆ)
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಗುಹಾಗರ ಗ್ರಾಮದಲ್ಲಿ ಸಚ್ಚಾರಿತ್ರ್ಯ, ಸಂಸ್ಕಾರಯುತ ಮನೆತನ ಖರೆ ಮನೆತನ. ಅನುದಿನವೂ ಮನೆಯಲ್ಲಿ ಮಂತ್ರೋಚ್ಚಾರ, ವೇದಘೋಷ, ಯಜ್ಞ ಯಾಗಾದಿಗಳ ಆಚರಣೆ. ಇಂತಹ ಕುಟುಂಬದಲ್ಲಿ 1868ರ ಮಾರ್ಚ್ 8ರಂದು ಭಾಸ್ಕರ ಶಾಸ್ತ್ರಿ ಖರೆ ದಂಪತಿಗಳ ಮಗನಾಗಿ ತ್ರ್ಯಂಬಕ ಖರೆಯವರು ಜನಿಸಿದರು. ನಾಲ್ಕನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಬಾಲಕ ತ್ರ್ಯಂಬಕನಿಗೆ ಎಂಟನೇ ವಯಸ್ಸಿನಲ್ಲಿ ಉಪನಯನವೂ, ಹದಿನಾಲ್ಕನೆಯ ವಯಸ್ಸಿನಲ್ಲಿ ವಿವಾಹವೂ ನಡೆಯಿತು. ತ್ರ್ಯಂಬಕನ ತಂದೆ ಭಾಸ್ಕರ ಖರೆಯವರು ಭೀವಂಡಿಯಲ್ಲಿ ವಕೀಲಿ ವೃತ್ತಿ ನಡೆಸುತ್ತ ರಾಜಕಾರಣದಲ್ಲೂ ಸಕ್ರಿಯರಾಗಿದ್ದವರು. 1884ರಲ್ಲಿ ಭೀವಂಡಿಗೆ ಶೃಂಗೇರಿಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಶಿವಾನುಭವ ನೃಸಿಂಹಭಾರತೀಗಳ ಆಗಮನವಾದಾಗ ಯತಿಗಳ ಸತ್ಕಾರದ ಹೊಣೆಯನ್ನು ಹೊತ್ತವರು ಈ ಖರೆ ಮನೆತನದವರು. ತನ್ನ ಸೇವೆಯಲ್ಲಿ ನಿರತನಾದ ಬಾಲಕ ತ್ರ್ಯಂಬಕನ ಮಾತು-ಕೃತಿಗಳನ್ನು, ಅಧ್ಯಯನಾಸಕ್ತಿಯನ್ನು, ವಿನಯ ವಿವೇಕಗಳನ್ನು ಕಂಡ ಶೃಂಗೇರಿಯ ಜಗದ್ಗುರುಗಳು 'ಈ ಬಾಲಕ ಮುಂದೆ ಜಗದ್ಗುರು ಶಂಕರಾಚಾರ್ಯ ಪೀಠವನ್ನು ಅಲಂಕರಿಸುತ್ತಾನೆ ಎಂದು ಹರಸಿದರಂತೆ. ಮಹಾತ್ಮರ ವಚನ ಸತ್ಯ ಪ್ರಮಾಣವಲ್ಲವೇ?
ಭಾರತವೇ ಚಿತ್ಪಾವನ ಕೋಕಣಸ್ಥ ಬ್ರಾಹ್ಮಣರ ಮೂಲ
ಚಿತ್ಪಾವನ ಕೋಕಣಸ್ಥ ಬ್ರಾಹ್ಮಣರು ಮೂಲತಃ ಭಾರತದವರಲ್ಲ, ಅವರು ಇರಾಣ ಅಥವಾ ಏಷ್ಯಾ ಖಂಡದ ದೇಶಗಳಿಂದ ವಲಸೆ ಬಂದು ಇಲ್ಲಿ ನೆಲೆಸಿದವರು ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯವಾದರೆ ಚಿತ್ಪಾವನ ಬ್ರಾಹ್ಮಣ ಸಮುದಾಯ ಯುರೋಪ್ ಖಂಡದ ಮಧ್ಯಭಾಗ ಅಥವಾ ಗ್ರೀಸ್ ದೇಶ ಅಥವಾ ಯುರೋಪ್ ಖಂಡದ ಯಾವುದಾದರೊಂದು ಭಾಗದಿಂದ ಭಾರತಕ್ಕೆ ಬಂದು ನೆಲೆಸಿದವರು ಎಂಬುದು ಇನ್ನು ಕೆಲವರ ವಾದ. ಈ ಎರಡು ವಾದಗಳಿಗೂ ಖಚಿತ ಸಮರ್ಥನೆಯನ್ನು ನೀಡುವಂತಹ ಯಾವ ಪುರಾವೆಗಳೂ ಇಲ್ಲ.ನನ್ನ ಹೇಳಿಕೆ ಹೀಗಿದೆ, ಚಿತ್ಪಾವನ ಕೋಕಣಸ್ಥ ಬ್ರಾಹ್ಮಣರು ಮೂಲತಃ ಭಾರತದವರಾಗಿದ್ದು ಅವರು ಪರಶುರಾಮನೊಂದಿಗೆ ಬಂದು ಅವನಿಂದ ನಿರ್ಮಿತವಾದ ಕೋಕಣಭೂಮಿಯ ಸ್ಥಾಪನೆಯಲ್ಲಿ ಸಹಭಾಗಿಗಳಾದವರು.
चित्पावन कोकणस्थ ब्राह्मणांचे मूळ भारतातच
चित्पावन कोकणस्थ ब्राह्मण हे मूळचे भारतीय नव्हेत, तर ते इराण किंवा तत्सम पश्चिम आशियाई देशांतून भारतामध्ये येऊन स्थानिक झाले, असेकाही जण म्णणतात, तर अन्य कही लोक म्हणतात की चित्पावन कोकणस्थ ब्राह्मण युरोपामधून किंवा ग्रीसमधून किंवा तत्सम युरोपीय भागातून भारतात आले. मात्र या दोन्हि मतांना एकही पुरावा कुणी दिलेल नाही. माझे म्हणणे असे आहे की, चित्पावन कोकणस्थ ब्राह्मण हे मूळचे भारतातीलच असून ते परशुरामाबरोबर कोकणात आले व कोकणभूमि नव्याने वसविण्यात सहभागी झाले. कोकणभूमी परशुरामाने वसवली हे महाभारतादी पुराणांवरून निदर्शनास येते. एकट्या परशुरामाने नवीन वसाहत निर्माण केली, असे म्हणणे कठीण आहे. त्याचे सहकारी असलेच पाहिजेत.