ದೇವಾಲಯಗಳು

ಬರಯ ಶ್ರೀ ಗೋಪಾಲಕೃಷ್ಣ ದೇವಾಲಯ

ಹಿಂದೆ ಓದಿ

ಶ್ರೀ ಗೋಪಾಲಕೃಷ್ಣ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ಬರಯ ಎಂಬಲ್ಲಿದೆ. ಬೆಳ್ತಂಗಡಿಯಿಂದ ನಾರಾವಿಗೆ ಹೋಗುವ ರಸ್ತೆಯಲ್ಲಿ ಸಿಗುವ ಅಳದಂಗಡಿ ಪೇಟೆಯಿಂದ ಇಲ್ಲಿಯವರೆಗೆ ನೇರ ರಸ್ತೆಯಿದೆ. ಈ ದೇವಾಲಯವು ಅಳದಂಗಡಿಯ ಅಜಿಲ ಅರಸರು ನಿರ್ಮಿಸಿರುವ ತನ್ನ ಕಾಷ್ಠಶಿಲ್ಪಗಳಿಗೆ ಪ್ರಸಿದ್ಧವಾಗಿರುವ ಬರಯ ಅರಮನೆಯ ಸಮೀಪದಲ್ಲಿದೆ. ಇಲ್ಲಿಂದ ಅನತಿ ದೂರದಲ್ಲಿ ಕುದುರೆಮುಖ ಪರ್ವತಗಳ ತಪ್ಪಲಲ್ಲಿ ಹುಟ್ಟಿ ಅರಬ್ಬಿ ಸಮುದ್ರದ ಕಡೆಗೆ ಹರಿಯುವ ಫಲ್ಗುಣಿ ನದಿ ಇದೆ. ಪರಿಸರವು ನಾಣಿಂಜಮಲೆ ಎಂಬ ರಕ್ಷಿತಾರಣ್ಯದ ಹಸಿರು ವನಸಿರಿಯ ಮಧ್ಯದಲ್ಲಿದ್ದು ಬಹಳ ಪ್ರಶಾಂತವಾಗಿದೆ. ಇಂತಹ ಪ್ರಾಕೃತಿಕ ಸೌಂದರ್ಯ ಹಾಗೂ ಸವಲತ್ತುಗಳಿಂದ ಸಂಪನ್ನವಾಗಿರುವ ಈ ದೇವಾಲಯವು ಇತ್ತೀಚೆಗೆ ಪೂರ್ಣ ಜೀರ್ಣೋದ್ಧಾರಗೊಂಡು ಸರ್ವಾಂಗ ಸುಂದರವಾಗಿ ಜನರನ್ನು ತನ್ನತ್ತ ಕರೆಯುತ್ತಿದೆ.

ನೋಡಿದೊಡನೆ ತನ್ನತ್ತ ಆಕರ್ಷಿಸುವ ಈ ದೇವಾಲಯವು ಜೀರ್ಣೋದ್ಧಾರದಿಂದಾಗಿ ಸುದೃಢಗೊಳ್ಳುವುದರೊಂದಿಗೆ ಪುನರ್ ನಿರ್ಮಾಣಗೊಂಡ ನಾಗಬನ, ಅಶ್ವತ್ಥಕಟ್ಟೆ, ಕೊಡಮಣಿತ್ತಾಯ ದೈವಸ್ಥಾನ, ವಸಂತ ಮಂಟಪ, ಸುತ್ತಲಿನ ಪೌಳಿಗಳು, ಕಾರ್ಯಾಲಯ, ಪಾಕಶಾಲೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತವೆನಿಸುವ ಸಭಾಂಗಣ, ಸಂಗ್ರಾಹಣಾ ಕೊಠಡಿ, ಆಕರ್ಷಕವಾದ ಗೋಪುರ, ಧ್ವಜಸ್ತಂಭ ಇತ್ಯಾದಿ ಅಗತ್ಯದ ಎಲ್ಲ ಪರಿಕರಗಳನ್ನು ಈಗ ಪಡೆದುಕೊಂಡಿದೆ. ಬಹಳ ಹಿಂದಿನ ಕಾಲದಿಂದ ಮುಳಿಹುಲ್ಲಿನ ಮಾಡನ್ನು ಹೊಂದಿದ್ದರೂ ಈ ಶತಮಾನದ ಪ್ರಾರಂಭದಲ್ಲೊಮ್ಮೆ ಈ ದೇವಾಲಯಕ್ಕೆ ಸಂಬಂಧಿಸಿದ ಚಿತ್ಪಾವನ ಬ್ರಾಹ್ಮಣ ಕುಟುಂಬಗಳಿಂದ ಅಜಿಲರ ಅರಮನೆಯ ಸಹಕಾರದೊಂದಿಗೆ ಜೀರ್ಣೋದ್ಧಾರಗೊಂಡು ಶಿಲಾಮಯ ಗರ್ಭಗೃಹವನ್ನು ಪಡೆದುಕೊಂಡಿತು. ಈ ಗರ್ಭಗೃಹವು ಪ್ರಾಂಗಣ ಮಟ್ಟದಿಂದ ಸ್ವಲ್ಪ ಎತ್ತರವಾಗಿ ನಿಂತಂತಿದ್ದು ಫಕ್ಕನೆ ವೀಕ್ಷಕರ ಗಮನ ಸೆಳೆಯುತ್ತದೆ. ಈ ಶಿಲಾಮಯ ರಚನೆಯಿಂದಾಗಿ ಇದು ಹಲವಾರು ಶತಮಾನಗಳಷ್ಟು ಪ್ರಾಚೀನವಾದ ದೇವಾಲಯವಾಗಿರಬಹುದೇ ಎಂಬ ಸಂಶಯವೂ ಬರುತ್ತದೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಇದು ಎರಡುವರೆ ಶತಮಾನಗಳ ಹಿಂದೆ ಕಟ್ಟಲ್ಪಟ್ಟ ಅರ್ವಾಚೀನ ದೇವಾಲಯ.

ಗರ್ಭಗೃಹದ ಗೋಡೆ, ಮಾಡು ಮತ್ತು ಕಂಬಗಳು ಪರಿಸರದಲ್ಲಿ ಸಾಮಾನ್ಯವಾಗಿ ಸಿಗುವ ಕರ್ಗಲ್ಲಿನಿಂದ ಮಾಡಲ್ಪಟ್ಟಿವೆ. ಈ ಕಲ್ಲು ಬಹಳ ಗಡಸು ಜಾತಿಯದಾಗಿದ್ದು ಕೆಲವರು ಇದನ್ನು ರುದ್ರಾಕ್ಷಿ ಶಿಲೆ ಎಂದು ಗುರುತಿಸಿದ್ದೂ ಇದೆ. ಈ ಅಭಿಪ್ರಾಯಕ್ಕೆ ಕಾರಣವಾದುದು ಇದೇ ಶಿಲೆಯಿಂದ ಮಾಡಲ್ಪಟ್ಟ ಈ ದೇವಾಲಯದ ಒಳ ಪ್ರಾಂಗಣದಲ್ಲಿರುವ ತುಳಸಿಕಟ್ಟೆಗೆ ಜೋಡಿಸಿರುವ ತ್ರಿಭಂಗ ವಿನ್ಯಾಸದಲ್ಲಿ ನಿಂತು ಕೊಳಲನ್ನು ಊದುತ್ತಿರುವ ಶ್ರೀ ಕೃಷ್ಣನ ಮೂರ್ತಿಯಾಗಿರಬೇಕು. ಆದರೆ ಗರ್ಭಗೃಹದಲ್ಲಿದ್ದು ಪೂಜಿಸಲ್ಪಡುವ ಶ್ರೀ ಗೋಪಾಲಕೃಷ್ಣಮೂರ್ತಿ ಇನ್ನಷ್ಟು ಕರಿಯಾದ ಶಿಲೆಯಿಂದ ಮಾಡಲ್ಪಟ್ಟಿದ್ದು ಬಹಳ ಆಕರ್ಷಕವಾಗಿದೆ. ಸಾಮಭಂಗಿಯಲ್ಲಿ ನಿಂತು ಕೈಗಳಲ್ಲಿ ಶಂಖ, ಚಕ್ರ ಮತ್ತು ಬೆಣ್ಣೆ ಮುದ್ದೆಯನ್ನು ಹಿಡಿದು ಬಲಕ್ಕೆ ಅಭಯವನ್ನು ನೀಡುವ ಪ್ರಸನ್ನವದನ ಮನೋಭಾವದ ಗೋಪಾಲಕೃಷ್ಣನೀತ, ಕವಚ ಕಿರೀಟಗಳನ್ನು ಧರಿಸಿ ಅಲಂಕಾರಗೊಳಿಸಿದರೆ ಜಗತ್ ಪಾಲಕನಂತೆ ತ್ರಿಲೋಕಸುಂದರನಾಗಿ ಕಂಗೋಳಿಸುವ ದೇವನೀತ.

ದೇವಾಲಯ ನಿರ್ಮಾಣ : ಈ ದೇವಾಲಯ ನಿರ್ಮಾಣದ ಬಗ್ಗೆ ಹಲವು ಐತಿಹ್ಯಗಳಿವೆ. ಒಬ್ಬರಿಂದ ಒಬ್ಬರಿಗೆ ಬಾಯ್ದೆರೆಯಾಗಿ ಬಂದ ವದಂತಿಗಳಿವೆ. ಇಂತಹ ಎಲ್ಲ ಐತಿಹ್ಯ, ವದಂತಿಗಳು ಹೇಳುವಂತೆ ಈ ದೇವಾಲಯವು ಚಿತ್ಪಾವನ ಬ್ರಾಹ್ಮಣ ಸಮಾಜದಿಂದ ನಿರ್ಮಾಣಗೊಂಡು ನಡೆಸಲ್ಪಡುತ್ತಿತ್ತು. ಆದರೆ ಕಾಲಕಾಲಕ್ಕೆ ಸ್ಥಳೀಯ ಅಜಿಲ ಅರಸರ ರಾಜಾಶ್ರಯವನ್ನು ಪಡೆದು ಆರ್ಥಿಕ ಹಾಗೂ ಆಡಳಿತಾತ್ಮಕ ಸುಧೃಢತೆಯನ್ನು ಪಡೆದಿತ್ತು. ಆದುದರಿಂದ ಇಂದಿಗೂ ಅಜಿಲ ವಂಶದ ಅರಸರು ತಮ್ಮ ಬಿರುದು ಬಾವಲಿಗಳೊಂದಿಗೆ, ರಾಜಲಾಂಛನಗಳೊಂದಿಗೆ ಇಲ್ಲಿಯ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಮಹಾರಾಷ್ಟ್ರದ ರತ್ನಗಿರಿ, ಪೂನಾ ಇತ್ಯಾದಿ ಕಡೆಗಳಿಂದ ಕರ್ನಾಟಕಕ್ಕೆ ವಲಸೆ ಬಂದ ಈ ಚಿತ್ಪಾವನ ಬ್ರಾಹ್ಮಣರು ತಮ್ಮ ವಿದ್ವತ್ತು, ಸೌಜನ್ಯ, ಸಹಕಾರ ಮನೋಭಾವ, ಹೊಂದಿಕೊಳ್ಳುವ ಸ್ವಭಾವ ಇತ್ಯಾದಿ ವ್ಯಾವಹಾರಿಕ ಗುಣಗಳನ್ನು ಹೊಂದಿದ್ದರಿಂದ ತಾವು ವಲಸೆ ಹೋದ ಕಡೆಯ ಜನರ ಸಹಕಾರವನ್ನೂ, ತುಳುನಾಡಿನ ಹಲವು ಅರಸು ಮನೆತನಗಳ ರಾಜಾಶ್ರಯವನ್ನು ಪಡೆದಿದ್ದರು. ಅಂತಹವರ ಪೈಕಿ ಅಜಿಲ ರಾಜ್ಯದ ಪೆರುವೋಡಿತ್ತಾಯ ಮಾಗಣೆಯಲ್ಲಿ ಚಿತ್ಪಾವನ ಗಾಡಗೀಳ ವಂಶದವರು ಮಾಗಣೆ ಅಧಿಕಾರಿಗಳಾಗಿಯೂ, ಕಾಜಿಮುಗೇರಿನ ಕೇಳ್ಕರ್ ವಂಶದವರು ಅರಮನೆಯಲ್ಲಿ ರಾಜಪುರೋಹಿತರಾಗಿಯೂ ನೇಮಕಗೊಂಡಿದ್ದರು. ಇವರ ಪೈಕಿ ಗಾಡಗೀಳ ವಂಶದ ಕೃಷ್ಣಭಟ್ಟ ಎಂಬವರಿಂದ ಈ ದೇವಾಲಯ ನಿರ್ಮಾಣಗೊಂಡಿತ್ತೆಂದೂ, ಕಾಜಿಮುಗೇರಿನ ಕೇಳ್ಕರ್ ಮನೆತನದ ರಾಜಪುರೋಹಿತರೇ ಈ ದೇವಾಲಯದಲ್ಲಿ ಆನುವಂಶಿಕ ತಂತ್ರಿಗಳಾಗಿ ಅರಮನೆಯಿಂದ ನೇಮಕಗೊಂಡಿದ್ದರೆಂದು ಹೇಳಲಾಗುತ್ತದೆ. ಕೇಳ್ಕರ್ ವಂಶದವರೇ ಇಂದಿಗೂ ಈ ದೇವಾಲಯದಲ್ಲಿ ತಂತ್ರಿಗಳಾಗಿರುವರು. ಈ ಎರಡು ವಂಶಗಳಿಗೂ ಈ ಅರಸು ಮನೆತನಕ್ಕೂ ಈ ತೆರನಾದ ಸಂಬಂಧವಿದ್ದುದರಿಂದ ಈ ದೇವಾಲಯದ ಸ್ಥಿತಿ ಇತಿಹಾಸ ಕಾಲದಲ್ಲಿ ಚೆನ್ನಾಗಿತ್ತೆಂದು ಹೇಳಬಹುದು. ಹೇಗಿದ್ದರೂ ಈವರೆಗೆ ಈ ದೇವಾಲಯ ನಿರ್ಮಾಣ ಮತ್ತು ಬೆಳವಣಿಗೆಯ ಬಗ್ಗೆ ಇತಿಹಾಸ ಒಪ್ಪುವ ರೀತಿಯಲ್ಲಿ ನಿರ್ದಿಷ್ಟವಾಗಿ ಹೇಳಲು ಸಹಾಯಕವಾಗುವ ಅಧಿಕೃತ ದಾಖಲೆಗಳ ಅಭಾವವಿತ್ತು.

ಅದೃಷ್ಟವಶಾತ್ ಈ ದೇವಾಲಯಕ್ಕೆ ಸಂಬಂಧಪಟ್ಟ ವ್ಯಕ್ತಿಯೊಬ್ಬರಲ್ಲಿ ಈ ದೇವಾಲಯಕ್ಕೆ ಸಂಬಂಧಿಸಿದ ಎರಡು ತಾಮ್ರಶಾಸನಗಳಿದ್ದವು. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಓದಿ, ಅಧ್ಯಯನ ಮಾಡಿ, ಇತಿಹಾಸದೊಂದಿಗೆ ತುಲನೆ ಮಾಡಿ, ತಾಳೆ ನೋಡಿ ಈ ದೇವಾಲಯದ ಐತಿಹಾಸಿಕ ಹಿನ್ನೆಲೆಯನ್ನು ಹೇಳುವುದು ಸುಲಭ ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಅದಕ್ಕೂ ಒಂದು ಶುಭ ಸಂದರ್ಭ ಒದಗಿ ಈ ಎರಡು ತಾಮ್ರಶಾಸನಗಳ ಅಧ್ಯಯನ ನಡೆಯಿತು. ಪರಿಣಾಮವಾಗಿ ಈ ದೇವಾಲಯದ ಹಿನ್ನೆಲೆಗೆ ಸಂಬಂಧಪಟ್ಟ ಅಮೂಲ್ಯವಾದ ಅಧಿಕೃತ ವಿವರಗಳು ಬೆಳಕಿಗೆ ಬಂದಿವೆ. ಈ ತಾಮ್ರ ಶಾಸನಗಳುಈ ದೇವಾಲಯದ ಐತಿಹಾಸಿಕ ಹಿನ್ನೆಲೆಯ ಬಗೆಗೆ ಇನ್ನು ಯಾವುದೇ ಊಹಾಪೋಹಗಳಿಗೆ ಅವಕಾಶ ಕೊಡದೆ ಈ ದೇವಾಲಯದ ನಿರ್ಮಾಣ, ನಿರ್ಮಾಣದ ಕರ್ತೃಗಳು, ನಿರ್ಮಾಣದ ಕಾಲ, ಅರಸರೂ, ಜನರೂ ಕೊಟ್ಟ ದಾನದತ್ತಿಗಳು ಇತ್ಯಾದಿ ಹಲವಾರು ವಿಷಯಗಳ ಬಗೆಗೆ ಅಧಿಕೃತವಾದ ಸ್ಪಷ್ಟ ವಿವರಗಳನ್ನು ನೀಡುತ್ತವೆ. ಆದುದರಿಂದ ಈ ವಿವರಗಳನ್ನು ದೇವಾಲಯದ ಭಕ್ತಾಭಿಮಾನಿಗಳೆಲ್ಲರೂ ಗೌರವದಿಂದ ಕಾಣಬೇಕಾಗಿದೆ. ಇವೆರಡು ಸ್ವತಂತ್ರವಾದ ಎರಡು ಬೇರೆ ಬೇರೆ ತಾಮ್ರಪಟಗಳ ಮೇಲೆ ಬರೆಯಲ್ಪಟ್ಟಿವೆ.

ಇವುಗಳ ಪೈಕಿ ಒಂದನೆಯದು ಶಾಲಿವಾಹನ ಶಕ 1637ನೆಯ ಜಯನಾಮ ಸಂವತ್ಸರದ ಚೈತ್ರ ಶುದ್ಧ ದಶಮಿ ಅಂದರೆ 1714ನೇ ಮಾರ್ಚ್ ತಿಂಗಳ 14ನೇ ತಾರಿಕಿನಂದು ಬರೆಯಲ್ಪಟ್ಟಿತು. ಇದು ಮಧ್ಯಕಾಲದ ಕನ್ನಡ ಭಾಷೆ ಹಾಗೂ ಕನ್ನಡ ಲಿಪಿಯಲ್ಲಿದೆ. ಇದರಲ್ಲಿ ಒಟ್ಟು 52ಪಂಕ್ತಿ (ಸಾಲು)ಗಳಿವೆ. ಈ ಶಾಸನವನ್ನು ಬೆಳ್ತಂಗಡಿ ತಾಲೂಕಿನ ಈಶಾನ್ಯ ದಿಕ್ಕಿಗಿರುವ ಬೈಲದಂಗಡಿಯಿಂದ ಆಳುತ್ತಿದ್ದ ಮೂಲ ಎಂಬ ಜೈನ ಅರಸು ಮನೆತನದ ಶಂಕರ ಅರಸ ಎಂಬವರ ಸೊಸೆಯಾಗಿದ್ದ ಚೆನ್ನಮ್ಮದೇವಿ ಎಂಬುವಳ ಪುತ್ರರಾಗಿದ್ದ ಚನ್ನಪ್ಪ ಅರಸರು ಬರೆಸಿದ್ದರು. ಈ ಶಾಸನದ 8ರಿಂದ 14ನೇಯ ಸಾಲಿನವರೆಗೆ ಹೇಳಿರುವಂತೆ ಗಾರ್ಗ್ಯ ಗೋತ್ರದ ಆಶ್ವಲಾಯನ ಸೂತ್ರದ ಋಕ್ ಶಾಖೆಯ ಬಾಬು (ಬಾಪು) ಭಟ್ಟರ ಮಗನಾದ ರಾಮಭಟ್ಟರ ಪುತ್ರ ಕೃಷ್ಣಭಟ್ಟ ಎಂಬುವರು ಪ್ರಸ್ತುತ ಬರಾಯದ ಶ್ರೀ ಗೋಪಾಲಕೃಷ್ಣ ದೇವಾಲಯವನ್ನು ನಿರ್ಮಿಸಿದ್ದರು. ಜೊತೆಗೆ ಅವರೇ ಈ ದೇವಾಲಯದಲ್ಲಿ ಶ್ರೀ ಗೋಪಾಲಕೃಷ್ಣನ ಮೂರ್ತಿಯನ್ನು ಸ್ಥಾಪಿಸಿದ್ದರು.ಆದರೆ ರಾಮಭಟ್ಟರ ಇನ್ನೊಬ್ಬ ಪುತ್ರರಾಗಿದ್ದ ನಿಗಳೆ ಸೂರಪ್ಪಯ್ಯ ಎಂಬವರ ಹೆಸರು ಕೂಡ ಇಲ್ಲಿ ಬಂದಿರುವುದರಿಂದ ಅವರೂ ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡಿರಬೇಕೆಂದು ಈ ತಾಮ್ರಶಾಸನದಲ್ಲಿ ಕಾಣುತ್ತದೆ. ಈ ಶಾಸನದ ಮುಂದಿನ ಸಾಲುಗಳಿಂದ ಹಾಗೂ ಜೊತೆಯಲ್ಲಿರುವ ಇನ್ನೊಂದು ತಾಮ್ರಶಾಸನದ ಅಧ್ಯಯನದಿಂದ ರಾಮಭಟ್ಟರ ಮಗ ಕೃಷ್ಣಭಟ್ಟರೇ ಈ ದೇವಾಲಯವನ್ನು ನಿರ್ಮಿಸಿ ಶ್ರೀ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಟಾಪಿಸಿದ್ದರೆಂದು ಸ್ಪಷ್ಟವಾಗುತ್ತದೆ.

ಈ ದೇವಾಲಯದಲ್ಲಿ ಪ್ರತಿಷ್ಠಾಪಿತವಾಗಿ ಪೂಜಿಸಲ್ಪಡುವ ದೇವರು ಗೋಪಾಲಕೃಷ್ಣನೇ ಸರಿ. ಆದರೆ ಒಳ ಪ್ರಾಂಗಣದಲ್ಲಿ ತುಳಸಿಕಟ್ಟೆಯ ಕಲ್ಲಿನ ಮೇಲಿರುವ ಕೃಷ್ಣನ ವಿಗ್ರಹದಲ್ಲಿ ಅಕ್ಕಪಕ್ಕಗಳಲ್ಲಿ ಗೋವುಗಳು ಮತ್ತು ಗೋಪಾಲಕರ ಆಕೃತಿಗಳು ಇರುವುದರಿಂದ ಆತನು ನಿಜವಾಗಿಯೂ ಗೋಪಾಲಕೃಷ್ಣ, ಗರ್ಭಗೃಹದೊಳಗೆ ಪೂಜಿಸಲ್ಪಡುವ ವಿಗ್ರಹದಲ್ಲಿ ಕೃಷ್ಣನ ಸುತ್ತಲೂ ಅಂತಹ ಯಾವುದೇ ಆಕೃತಿಗಳಿಲ್ಲ. ಆದುದರಿಂದ ಅವನು ಗೋಪಾಲಕೃಷ್ಣನಲ್ಲ ಎಂದು ವಾದಿಸುವವರು ಇರಬಹುದು. ಆದರೆ ಸಾಮಾನ್ಯವಾಗಿ ಒಂದು ವಿಗ್ರಹದಲ್ಲಿ ನಾವು ಯಾವ ದೇವರನ್ನು ಆವಾಹನೆ ಮಾಡಿ ಪೂಜಿಸುತ್ತೇವೆಯೋ ಆ ವಿಗ್ರಹವು ಆ ದೇವರದ್ದೇ ಆಗಿರುತ್ತದೆ. ಇದು ನಮ್ಮಲ್ಲಿ ನಡೆದುಕೊಂಡು ಬಂದ ಸಂಪ್ರದಾಯ. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನಾವು ಕೊಡಬಹುದು. ಇದಕ್ಕೂ ಹೆಚ್ಚಾಗಿ ಈ ದೇವಾಲಯವನ್ನು ನಿರ್ಮಿಸಿ, ಇದರಲ್ಲಿ ಪ್ರತಿಷ್ಠೆ ಮಾಡಿರುವ ದೇವರು ಗೋಪಾಲಕೃಷ್ಣ ಎಂಬುದನ್ನು ಈ ಎರಡು ತಾಮ್ರಶಾಸನಗಳು ಹೇಳುತ್ತವೆ. ಸಮಕಾಲೀನರಾದ ವಿಗ್ರಹದ ಪ್ರತಿಷ್ಟಾಪಕರೂ, ದೇವರಿಗೆ ದಾನದತ್ತಿಗಳನ್ನು ಬಿಟ್ಟ ಅರಸರೂ ಈ ಶಾಸನಗಳನ್ನು ಬರೆದವರೂ ಇದೇ ಹೆಸರನ್ನು ಹೇಳಿರುವುದರಿಂದ ಹಾಗೂ ಅವರಿಗೆ ಈ ವಿಚಾರಗಳು ಸ್ಪಷ್ಟವಾಗಿ ತಿಳಿದಿದ್ದುದರಿಂದ ಈ ದೇವಾಲಯದೊಳಗಿರುವ ಮೂರ್ತಿಯು ಶ್ರೀ ಗೋಪಾಲಕೃಷ್ಣ ದೇವರೇ ಆಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಯಾವುದೇ ಸಂಶಯವಿಲ್ಲ.

ಈ ದೇವಾಲಯ ನಿರ್ಮಾಣಗೊಂಡ ಸ್ಥಳದ ಬಗೆಗೆ ಈ ಶಾಸನದಲ್ಲಿ ಸ್ಪಷ್ಟವಾದ ವಿವರಗಳನ್ನು ಕೊಡಲಾಗಿದೆ. ಇದರ ಅನುಸಾರ ಅಜಿಲರ ಸೀಮೆಯ ಸುಳಕೇರಿ ಮಾಗಣೆಯಲ್ಲಿರುವ ಬರಯ ಗ್ರಾಮದ ನಾಗಪುರ ಎಂಬಲ್ಲಿ ಈ ದೇವಸ್ಥಾನ ನಿರ್ಮಾಣಗೊಂಡಿತ್ತು. ಈ ವಿವರಗಳನ್ನು ಶಾಸನದ 11 ಮತ್ತು 12ನೆಯ ಸಾಲುಗಳಲ್ಲಿ ಕೊಡಲಾಗಿದೆ. ಅಂದರೆ ಈಗ ದೇವಾಲಯವಿರುವ ಸ್ಥಳವು ಆ ಕಾಲದಲ್ಲಿ ನಾಗಪುರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಆದರೆ ಈಗ ಅದನ್ನು ಸೂಳಬೆಟ್ಟು ಎಂದು ಕರೆಯುತ್ತಾರೆ. ದೇವಸ್ಥಾನದ ನಿರ್ಮಾಣ ಕಾಲದಲ್ಲಿ ಸೂಳಬೆಟ್ಟು ಎಂಬ ಹೆಸರು ಇರಲಿಲ್ಲ. ಇಂದಿಗೂ ಈ ದೇವಸ್ಥಾನದ ಬಳಿ ಒಂದು ನಾಗಬನವಿರುವುದನ್ನು, ಅಲ್ಲಿ ನಾಗಬ್ರಹ್ಮ ಹಾಗೂ ಕೆಲವು ನಾಗರ ಕಲ್ಲುಗಳಿರುವುದನ್ನೂ, ಸಾಕ್ಷಾತ್ ಜೀವಂತ ನಾಗರಹಾವು ಇರುವುದನ್ನು ಕಾಣುತ್ತೇವೆ. ಈ ಕ್ಷೇತ್ರದಲ್ಲಿ ಏನಾದರೂ ವಿಶೇಷ ಬದಲಾವಣೆಗಳಾದರೆ ಈ ನಾಗ ಇಂದಿಗೂ ದರ್ಶನವನ್ನೀಯುತ್ತದೆ. ಆದುದರಿಂದ ಈ ಪರಿಸರವನ್ನು ಪುನಃ ಐತಿಹಾಸಿಕವಾದ ನಾಗಪುರವೆಂಬ ಹೆಸರಿನಿಂದಲೇ ಕರೆಯುವುದು ಸೂಕ್ತವೆನಿಸುತ್ತದೆ. ಈ ಸಮಗ್ರ ನಾಗಬನವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಪುನರ್ನಿರ್ಮಿಸಿಕೊಟ್ಟಿರುತ್ತಾರೆ. ಈ ಗೋಪಾಲಕೃಷ್ಣ ದೇವಾಲಯ ಯಾವ ಕಾಲದಲ್ಲಿ ನಿರ್ಮಾಣವಾಯಿತೆಂದು ನಿರ್ಧರಿಸಲು ಈ ಶಾಸನವೇ ಆಧಾರ. ಇದರ 12, 13 ಮತ್ತು 14ನೇ ಸಾಲುಗಳಲ್ಲಿ ಹೇಳಿರುವಂತೆ ಕೃಷ್ಣಭಟ್ಟರು "ಈ ದೇವಾಲಯವನ್ನು ನಿರ್ಮಿಸಿ ಪ್ರತಿಷ್ಠಾಪಿಸಿರುತ್ತೇನೆ, ಆದುದರಿಂದ ದೇವರಿಗೆ ಅಮೃತ ಪಡಿಯ ವ್ಯವಸ್ಥೆಯಾಗಬೇಕು' ಎಂದು ಮೂಲ ವಂಶದ ಚೆನ್ನಪ್ಪರಸರಲ್ಲಿ ಕೇಳಿದರು. ಅದರ ಅನುಸಾರ ಅರಸರು ಭೂಮಿಯನ್ನು ಉಂಬಳಿ ಬಿಟ್ಟು ಶಾಲಿವಾಹನ ಶಕ 1636ನೇ ಜಯನಾಮ ಸಂವತ್ಸರದ ಚೈತ್ರಶುದ್ಧ ದಶಮಿಯಂದು ಈ ಶಾಸನವನ್ನು ಬರೆಸಿದ್ದರು. ಆದುದರಿಂದ ಈ ದಿನಕ್ಕಿಂತ ಸ್ವಲ್ಪ ಮೊದಲು, ಅಂದರೆ ಇಂದಿಗೆ 300 ವರ್ಷಗಳ ಹಿಂದೆ ಈ ದೇವಾಲಯವು ನಿರ್ಮಾಣಗೊಂಡಿತ್ತೆಂದು ಹೇಳಬಹುದು.

ದಾನ ದತ್ತಿಗಳು : ಈ ದೇವಾಲಯದ ನಿಮಾರ್ತೃ ಕೃಷ್ಣಭಟ್ಟರು ಮೂಲ ವಂಶದ ಚನ್ನಪ್ಪ ಅರಸರಲ್ಲಿಯೂ, ಅವರ ರಾಜ್ಯದ ಪ್ರಜಾಜನರಲ್ಲಿಯೂ ವಿನಂತಿ ಮಾಡಿಕೊಂಡ ಅನುಸಾರ ಎಲ್ಲಾ ಪ್ರಜೆಗಳು ತಾವು ಅರಸರಿಗೆ ತಮ್ಮ ಭೂಮಿಯ ಸಂಬಂಧವಾಗಿ ಕೊಡಬೇಕಾಗಿದ್ದ ಭೂಕಂದಾಯವನ್ನು ಮಾತ್ರವಲ್ಲದೆ ಇನ್ನೂ ಹೆಚ್ಚಾಗಿ ಕೆಲವು ವರಹ ಎಂಬ ಹಣವನ್ನು ಶಿವಾರ್ಪಿತವೆಂದು ಈ ದೇವಾಲಯಕ್ಕೆ ಕೊಡಲು ಒಪ್ಪಿದರು. ಹಾಗೆಯೇ ಅಮೃತಪಡಿ ಮತ್ತು ಇತರ ವಿನಿಯೋಗಾದಿಗಳಿಗಾಗಿ ಕಾವಳ, ಪಜಿರಡ್ಕ, ತಾಡಿ ಮುಂತಾದ ಮಾಗಣೆಗಳಿಂದ ಕೆಲವು ಗದ್ದೆಗಳನ್ನು ಆ ದೇವಸ್ಥಾನಕ್ಕೆ ಬಿಟ್ಟುಕೊಟ್ಟರು. ಮೂಲ ಅರಸುಮನೆತನಕ್ಕೆ ವಂಶ ಪಾರಂಪರ್ಯವಾಗಿ ಬಂದಿದ್ದ ಕೆಲವು ಮಾಗಣೆಗಳಲ್ಲಿದ್ದ ಹಲವು ಗದ್ದೆ ಕುಳಂಜಿಗಳನ್ನು ಚನ್ನಪ್ಪರಸರು ಈ ದೇವಾಲಯಕ್ಕೆ ಬಿಟ್ಟುಕೊಟ್ಟರು. ಆ ಭೂಮಿಗಳಿಗೆ ಗಡಿ ಕಲ್ಲುಗಳನ್ನು ನೆಡಿಸಿ, ಅವುಗಳನ್ನು ಹೆಸರಿಸಿ ದಾನಕೊಟ್ಟ ಆ ಭೂಮಿಗಳ ಎಲ್ಲ ವಿವರಗಳನ್ನು ಈ ಶಾಸನದಲ್ಲಿ ದಾಖಲಿಸಿದರು ಹಾಗೂ ಆಡಳಿತ ಸುವ್ಯವಸ್ಥೆಗಾಗಿ ವಾಮನ ಮುದ್ರೆಯ ಕಲ್ಲುಗಳನ್ನು ಆ ಭೂಮಿಗಳ ಚತುರ್ಗಡಿಗಳಲ್ಲಿ ನೆಡಿಸಿದರು.

ದಾನ ಕೊಟ್ಟಿದ್ದ ಆ ಭೂಮಿಗಳಲ್ಲಿದ್ದ ನಿಧಿ, ನಿಕ್ಷೇಪ, ನೀರು, ಕಲ್ಲು, ಶಾಶ್ವತವಾಗಿರುವ ಸಂಪತ್ತು, ಮುಂದೆ ಬರುವ ಲಾಭಗಳು, ಈಗ ಇರುವ ಹಾಗೂ ಮುಂದೆ ಸಾಧ್ಯವಾಗುವ ಉತ್ಪತ್ತಿ ಮತ್ತು ಸಹಜಸಾಧ್ಯ ಸಂಪತ್ತೆಲ್ಲವನ್ನು ಗಳಿಸಿಕೊಂಡು ಅದರ ಸಹಾಯದಿಂದ ಕೃಷ್ಣಭಟ್ಟರು ವಂಶ ಪಾರಂಪರ್ಯವಾಗಿ ಸೂರ್ಯ ಚಂದ್ರರಿರುವ ತನಕ ಶಾಶ್ವತವಾಗಿ ದೇವರ ವಿನಿಯೋಗಾದಿಗಳನ್ನು ನಡೆಸಿಕೊಂಡು ಬರಬೇಕೆಂದು ತಿಳಿಸಲಾಗಿದೆ. ಇದಕ್ಕೆ ಸಾಕ್ಷಿಗಳು ಸೂರ್ಯ, ಚಂದ್ರ, ಗಾಳಿ, ಬೆಂಕಿ, ಆಕಾಶ, ಭೂಮಿ, ಹರಿಯುವ ನೀರು, ಹೃದಯ, ಯಮ, ಹಗಲು, ರಾತ್ರಿ ಮತ್ತು ಎರಡು ಸಂಧ್ಯಾಕಾಲಗಳು ಎಂದು ಈ ಶಾಸನದಲ್ಲಿ ಹೇಳಲಾಗಿದೆ. ದಾನ ಕೊಡುವುದು ಮತ್ತು ದಾನ ಪರಂಪರೆಯನ್ನು ಪಾಲಿಸಿಕೊಂಡು ಹೋಗುವುದರ ಪೈಕಿ ದಾನ ಕೊಡುವುದಕ್ಕಿಂತ ದಾನ ಪಾಲಿಸಿಕೊಂಡು ಹೋಗುವುದೇ ಹೆಚ್ಚು ಶ್ರೇಯಸ್ಕರ. ದಾನ ಮಾಡುವುದರಿಂದ ಸ್ವರ್ಗ ದೊರೆಯುತ್ತದೆ. ಪಾಲಿಸಿಕೊಂಡು ಹೋಗುವುದರಿಂದ ಅಚ್ಯುತ ಪದವಿಯು ಪ್ರಾಪ್ತವಾಗುತ್ತದೆ. ತಾನು ಕೊಟ್ಟಿರುವ ಅಥವಾ ಇನ್ನೊಬ್ಬರು ಕೊಟ್ಟಿರುವ ಭೂಮಿಯನ್ನು ಯಾರು ಅಪಹರಿಸುತ್ತಾರೋ ಅಂತಹವನು ಅರುವತ್ತು ಸಾವಿರ ವರ್ಷಗಳ ಕಾಲ ಮಲದಲ್ಲಿ ಕ್ರಿಮಿಯಾಗಿ ಹುಟ್ಟುತ್ತಾನೆ. ಆದುದರಿಂದ ಈ ಭೂಮಿಯನ್ನು ಯಾರೂ ಬಲಾತ್ಕಾರವಾಗಿ ಅಪಹರಿಸಿ ಉಪಯೋಗಿಸಬಾರದೆಂಬ ಎಚ್ಚರಿಕೆಯನ್ನು ಕೊಡಲಾಗಿದೆ.

ಎರಡನೆ ಶಾಸನದಿಂದ ಇನ್ನೂ ಕೆಲವು ಅಮೂಲ್ಯ ಮಾಹಿತಿಗಳು ದೊರೆಯುತ್ತವೆ. ಇದನ್ನು ಅಜಿಲ ರಾಜ ವಂಶದ ಶಂಕರದೇವಿ ಎಂಬ ರಾಣಿ ಬರೆಯಿಸಿದ್ದಳು. ಇತಿಹಾಸದಿಂದ ತಿಳಿದು ಬರುವಂತೆ ಈ ರಾಣಿಗೆ ಪದುಮಲದೇವಿ ಎಂಬ ಹೆಸರಿತ್ತು. ಅದೇ ಕೃಷ್ಣ ಭಟ್ಟರು ಅಜಿಲರ ಸೀಮೆಯ ಸುಳಕೇರಿ ಮಾಗಣೆ ಬರಯ ಗ್ರಾಮದ ನಾಗಪುರದಲ್ಲಿ ಹಿಂದೆ ಉಲ್ಲೇಖಿಸಿರುವ ದೇವಾಲಯವನ್ನು ಕಟ್ಟಿಸಿ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠೆ ಮಾಡಿ ದೇವರ ಪಂಚ ಪರ್ವ, ಕಟ್ಟುಕಟ್ಟಳೆ, ಕಂದಾಚಾರಗಳು, ಸರಿಯಾಗಿ ನಡೆಯುವಂತೆ ವ್ಯವಸ್ಥೆಯಾಗಲು ರಾಣಿಯಲ್ಲಿ ಮತ್ತು ಆಕೆಯ ಸಾವಿರಾರು ಪ್ರಜೆಗಳಲ್ಲಿ ಕೇಳಿಕೊಂಢ ಅನುಸಾರ ರಾಣಿಯು ಸಾಕಷ್ಟು ಭೂಮಿಯನ್ನು ಉಂಬಳಿ ಬಿಟ್ಟು ಅದಕ್ಕೆ ದಾಖಲೆಯಾಗಿ ಈ ತಾಮ್ರಶಾಸನವನ್ನು ಬರೆಯಿಸಿದ್ದಳು. ಈ ತಾಮ್ರಶಾಸನದಲ್ಲಿ ಹೇಳಿರುವಂತೆ ಅಜಿಲರ ಪ್ರಜೆಗಳು ಅರಮನೆಗೆ ಕೊಡುವ ಭೂ ಕಂದಾಯದ ಜೊತೆಗೆ ಮೆಣಸಿನ ಕಂದಾಯವನ್ನೂ ಸೇರಿಸಿ ಅದನ್ನು ದೇವಾಲಯಕ್ಕೆ ಕೊಡುವುದಾಗಿ ಒಪ್ಪಿಕೊಂಡರು. ಮಾತ್ರವಲ್ಲದೆ ಅಜಿಲರ ಅರಮನೆಯಿಂದ ಅರುವ, ಸುಳಕೇರಿ, ಯರಡೂರು, ವೇಣೂರು, ಕೇಳ, ಪೆರಿಂಜೆ, ಇರ್ವತ್ತೂರು ಮುಂತಾದ ಮಾಗಣೆಗಳಿಂದ ಕೆಲವು ಗದ್ದೆಗಳನ್ನು ಬಿಟ್ಟುಕೊಡಲಾಯಿತು ಕೈಕಾಣಿಕೆಯಾಗಿ ದೇವರಿಗೆ ನಲವತ್ತು ವರಹಗಳನ್ನು ಸಮರ್ಪಿಸಲಾಯಿತು. ಜೊತೆಗೆ ಯರಡೂರು ಮಾಗಣೆಯ ಸವಣಾಲು ಗ್ರಾಮದಿಂದ ಮತ್ತು ಪಡಂಗಡಿ ಗುತ್ತಿನಿಂದ ಅರಮನೆಗೆ ಬರುತ್ತಿದ್ದ ಭೂಕಂದಾಯವನ್ನು ಈ ದೇವಾಲಯಕ್ಕೆ ಕೊಡುವುದಾಗಿ ಒಪ್ಪಿಕೊಳ್ಳಲಾಯಿತು.

ಅಜಿಲರ ರಾಜ್ಯದ ಇತರ ಕೆಲವು ಕಡೆಗಳಿಂದ ಹಲವಾರು ಗದ್ದೆಗಳನ್ನು ದೇವಸ್ಥಾನಕ್ಕೆ ಬಿಟ್ಟು ಕೊಡಲಾಯಿತು. ಅಡಿಕೆ ಮರಗಳಿಂದ ಬರುವ ಉತ್ಪತ್ತಿಯನ್ನು ಅಳಂಬಿಕಲ್ಲು ಎಂಬಲ್ಲಿದ್ದ ಒಂದು ಸಾವಿರ ಮರಗಳಿಗೆ ಕೊಡುವ ತೆರಿಗೆಯನ್ನು ದೇವರಿಗೆ ಸಮರ್ಪಿಸಲಾಯಿತು. ಈ ಎಲ್ಲಾ ವಿವರಗಳನ್ನು ದಾಖಲಿಸಿ ಶಾಲಿವಾಹನ ಶಕ 1642ನೇ ಶಾರ್ವರಿ ಸಂವತ್ಸರದ ಚೈತ್ರ ಬಹುಳ ತದಿಗೆ ಅಂದರೆ ಕ್ರಿ.ಶ.1720ನೇ ಇಸವಿ ಏಪ್ರಿಲ್ ತಿಂಗಳ 14ನೇ ತಾರೀಕು ರವಿವಾರದಂದು ಈ ತಾಮ್ರ ಶಾಸನವನ್ನು ಬರೆಯಿಸಲಾಯಿತು. ಬೇರೆ ಶಾಸನಗಳಂತೆ ಇಲ್ಲಿಯೂ ಈ ದಾನ ವ್ಯವಸ್ಥೆಗೆ ಸೂರ್ಯ ಚಂದ್ರಾದಿಗಳೇ ಸಾಕ್ಷಿಯೆಂದೂ, ದಾನ ಕೊಟ್ಟ ಈ ಭೂಮಿಯನ್ನು ಯಾರೂ ಅಪಹರಿಸಬಾರದೆಂದೂ, ಒಂದು ವೇಳೆ ಉಪಯೋಗಿಸಿದರೆ ಅಂತವನು ಅರವತ್ತು ಸಾವಿರ ವರ್ಷಗಳ ಕಾಲ ಮಲದಲ್ಲಿ ಕ್ರಿಮಿಯಾಗಿ ಹುಟ್ಟುವನೆಂದು ಎಚ್ಚರಿಸಲಾಗಿದೆ. ಈ ರೀತಿಯಾಗಿ ಈ ದೇವಾಲಯದ ಬಗ್ಗೆ ಸಾಕಷ್ಟು ಅಧಿಕೃತ ವಿವರಗಳನ್ನು ಈ ಎರಡೂ ತಾಮ್ರಶಾಸನಗಳು ಒದಗಿಸಿಕೊಟ್ಟಿವೆ. ಇನ್ನೂ ಈ ದೇವಾಲಯದ ಬಗೆಗೆ ಯಾವುದೇ ವದಂತಿ, ಊಹಾಪೋಹಗಳಿಗೆ ಅವಕಾಶವಿಲ್ಲದಂತಾಗಿದೆ. ಈದು ಈ ದೇವಾಲಯದ ವಿಶೇಷ ಘನತೆಯೆಂದು ಹೇಳಬಹುದು.

ನಮಗೆ ಯಾವುದೇ ದೇವಾಲಯ ನಿರ್ಮಾಣದ ಬಗೆಗೆ ಶಾಸನಗಳು ಸಿಗುವುದು ಬಹಳ ಅಪರೂಪ. ಆದರೆ ಬರಯ ಶ್ರೀ ಗೋಪಾಲಕೃಷ್ಣ ದೇವಾಲಯದ ಇತಿಹಾಸದ ಕುರಿತಂತೆ ಈ ಎರಡು ತಾಮ್ರ ಶಾಸನಗಳು ದೊರಕಿರುವುದು ಒಂದು ಭಾಗ್ಯವೇ ಸರಿ. ಆದುದರಿಂದ ಇವುಗಳನ್ನು ಬರೆಸಿ ಈವರೆಗೂ ಜತನದಿಂದ ಉಳಿಸಿಕೊಂಢು ಬಂದವರಿಗೆ ನಾವು ಉಪಕೃತರಾಗಿರಬೇಕು. ಅದರಂತೆ ಇವುಗಳನ್ನು ಅಧ್ಯಯನ ಮಾಡಿಸಿ ಈ ದೇವಾಲಯದ ಐತಿಹಾಸಿಕ ಹಿನ್ನೆಲೆಯನ್ನು ಬೆಳಕಿಗೆ ತರುವಂತೆ ಪ್ರಯತ್ನಿಸಿದವರಿಗೂ ನಾವು ಕೃತಜ್ಞರಾಗಿರಬೇಕು.

ಬರಯ ಶ್ರೀ ಗೋಪಾಲಕೃಷ್ಣ ದೇವಾಲಯದ ತಾಮ್ರ ಶಾಸನಗಳು

ತಾಮ್ರ ಶಾಸನ -1

ಬೆಳ್ತಂಗಡಿ ತಾಲೂಕು ಪಿಲ್ಯ ಗ್ರಾಮದ ಸೂಳಬೆಟ್ಟು ಎಂಬಲ್ಲಿರುವ ಬರಯ ಶ್ರೀ ಗೋಪಾಲಕೃಷ್ಣ ದೇವಾಲಯಕ್ಕೆ ಸಂಬಂಧಿಸಿದಂತೆ ಎರಡು ತಾಮ್ರ ಶಾಸನಗಳು ದೊರಕಿವೆ. ಇವು ದೇವಾಲಯ ಜೀಣೋದ್ಧಾರ ಸಮಿತಿಯವರ ವಶದಲ್ಲಿದ್ದವು. ಇವು ಬಹಳ ಐತಿಹಾಸಿಕ ಮಹತ್ವವುಳ್ಳವುಗಳು. ಈ ತಾಮ್ರ ಶಾಸನಗಳುಈ ದೇವಾಲಯದ ಐತಿಹಾಸಿಕ ಹಿನ್ನೆಲೆಯ ಬಗೆಗೆ ಇನ್ನು ಯಾವುದೇ ಊಹಾಪೋಹಗಳಿಗೆ ಅವಕಾಶ ಕೊಡದೆ ಈ ದೇವಾಲಯದ ನಿರ್ಮಾಣ, ನಿರ್ಮಾಣದ ಕರ್ತೃಗಳು, ನಿರ್ಮಾಣದ ಕಾಲ, ಅರಸರೂ, ಜನರೂ ಕೊಟ್ಟ ದಾನದತ್ತಿಗಳು ಇತ್ಯಾದಿ ಹಲವಾರು ವಿಷಯಗಳ ಬಗೆಗೆ ಅದಿಕೃತವಾದ ಸ್ಪಷ್ಟ ವಿವರಗಳನ್ನು ನೀಡುತ್ತವೆ. ಬರವಣಿಗೆಯಲ್ಲಿ ಕೆಲವು ಕಾಗುಣಿತದ ತಪ್ಪುಗಳಿದ್ದರೂ ಈ ಶಾಸನವನ್ನು ಸುಲಭವಾಗಿ ಓದಿ ಅರ್ಥ ಮಾಡಿಕೊಳ್ಳಬಹುದು.

"ಶುಭಮಸ್ತು" ಎಂಬ ಮಂಗಲಕರ ಪದದಿಂದ ಈ ಶಾಸನವು ಪ್ರಾರಂಭವಾಗುತ್ತದೆ. ಅನಂತರ ಸಂಸ್ಕೃತ ಭಾಷೆಯಲ್ಲಿರುವ "ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರಚಾರವೇ | ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ || ಎಂಬ ಶಿವಸ್ತುತಿಯೊಂದಿಗೆ ಮುಂದುವರಿಯುತ್ತದೆ. ಈ ಶಾಸನವನ್ನು ಮೂಲ ಎಂಬ ಜೈನ ಅರಸು ಮನೆತನದ ಶಂಕರ ಅರಸ ಎಂಬವರ ಸೊಸೆಯಾದ ಚೆನ್ನಮ್ಮ ದೇವಿ ಎಂಬವರ ಪುತ್ರರಾದ ಚನ್ನಪ್ಪರಸ ಎಂಬ ಅರಸರು ಬರೆಸಿದ್ದರು. ( ಈ ಅರಸು ಮನೆತನದವರು ಈಗಿನ ಬೆಳ್ತಂಗಡಿ ತಾಲೂಕಿನ ಈಶಾನ್ಯ ಭಾಗದಲ್ಲಿರುವ ಬೈಲಂಗಡಿಯಿಂದ ಆಳುತ್ತಿದ್ದರು.) ಇದೊಂದು ದಾನ ಶಾಸನ. ಬರಯದ ಶ್ರೀ ಗೋಪಾಲಕೃಷ್ಣದೇವರ ಅಮೃತ ಪಡಿಗಾಗಿ ಈ ಅರಸರು ಕೊಟ್ಟ ಭೂಧಾನದ ಕೊಡುಗೆಯನ್ನು ವಿವರಿಸುತ್ತದೆ. ಈ ವಿವರಗಳೆ ಶಾಸನದ ಹೆಚ್ಚಿನ ಭಾಗವನ್ನು ಆಕ್ರಮಿಸಿವೆ.

ಸಾಮಾನ್ಯವಾದ ಬೇರೆ ಶಾಸನಕ್ಕಿಂತ ಈ ತಾಮ್ರ ಶಾಸನದ ಹೆಚ್ಚಿನ ಮಹತ್ವವೇನೆಂದರೆ ಇದು ದೇವಾಲಯದ ನಿರ್ಮಾಣದ ಕರ್ತೃಗಳ ಬಗ್ಗೆ ಸ್ಪಷ್ಟವಾದ ವಿವರವನ್ನು ಕೊಡುವಂಥದ್ದು. ಈ ಶಾಸನದ 8ರಿಂದ 14ನೇ ಸಾಲಿನವರೆಗೆ ಹೇಳಿರುವಂತಹ ಗಾರ್ಗ್ಯ ಗೋತ್ರದ ಅಶ್ವಲಾಯನ ಸೂತ್ರದ ಋಕ್ ಶಾಖೆಯ ಬಾಬು ಭಟ್ಟರ ಮಗನಾದ ರಾಮಭಟ್ಟರ ಪುತ್ರ ಕೃಷ್ಣಭಟ್ಟ ಎಂಬವರು ಈ ಬರಯ ಶ್ರೀ ಗೋಪಾಲಕೃಷ್ಣ ದೇವಾಲಯವನ್ನು ನಿರ್ಮಿಸಿದ್ದರು. ಜೊತೆಗೆ ಅವರೇ ಶ್ರೀ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಆದರೆ ರಾಮಭಟ್ಟರ ಇನ್ನೊಬ್ಬ ಪುತ್ರನಾದ ನಿಗಳೇ ಸೂರಪ್ಪಯ್ಯ ಎಂಬವರ ಹೆಸರೂ ಕೂಡ ಇಲ್ಲಿ ಬಂದಿರುವುದರಿಂದ ಅವರೂ ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡಿರಬೇಕು ಎಂದೆನಿಸುತ್ತದೆ. ಆದರೆ ಈ ಶಾಸನದ ಮುಂದಿನ ಸಾಲುಗಳಿಂದ ಹಾಗೂ ಜತೆಯಲ್ಲಿರುವ ಇನ್ನೊಂದು ತಾಮ್ರಶಾಸನದ ಅಧ್ಯಯನದಿಂದ ತಿಳಿದು ಬರುವಂತೆ ರಾಮಭಟ್ಟರ ಮಗ ಕೃಷ್ಣಭಟ್ಟರೇ ಈ ದೇವಾಲಯವನ್ನು ನಿರ್ಮಿಸಿ ಶ್ರೀ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠಾಪಿಸಿದ್ದರು.

ಈ ದೇವಾಲಯ ನಿರ್ಮಾಣಗೊಂಡ ಸ್ಥಳದ ಬಗೆಗೆ ಈ ಶಾಸನದಲ್ಲಿ ಸ್ಪಷ್ಟವಾದ ವಿವರಗಳನ್ನು ಕೊಡಲಾಗಿದೆ. ಇದರ ಅನುಸಾರ ಅಜಿಲರ ಸೀಮೆಯ ಸುಳಿಕೇರಿ ಮಾಗಣೇಯಲ್ಲಿರುವ ಬರಯ ಗ್ರಾಮದ ನಾಗಪುರ ಎಂಬಲ್ಲಿ ಈ ದೇವಸ್ಥಾನ ನಿರ್ಮಾಣಗೊಂಡಿತ್ತು. ಈ ವಿವರಗಳನ್ನು ಶಾಸನದ ೧೧ ಮತ್ತು 12ನೆಯ ಸಾಲುಗಳಲ್ಲಿ ಕೊಡಲಾಗಿದೆ. ಅಂದರೆ ಈಗ ದೇವಾಲಯವಿರುವ ಸ್ಥಳವು ಆ ಕಾಲದಲ್ಲಿ ನಾಗಪುರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಆದರೆ ಈಗ ಅದನ್ನು ಸೂಳಬೆಟ್ಟು ಎಂದು ಕರೆಯುತ್ತಾರೆ. ದೇವಸ್ಥಾನದ ನಿರ್ಮಾಣ ಕಾಲದಲ್ಲಿ ಸೂಳಬೆಟ್ಟು ಎಂಬ ಹೆಸರು ಇರಲಿಲ್ಲ. ಇಂದಿಗೂ ಈ ದೇವಸ್ಥಾನದ ಬಳಿ ಒಂದು ನಾಗಬನವಿರುವುದನ್ನು, ಅಲ್ಲಿ ಒಂದು ನಾಗ ಬ್ರಹ್ಮನ ಹಾಗೂ ಕೆಲವು ನಾಗರ ಕಲ್ಲುಗಳಿರುವುದನ್ನೂ, ಸಾಕ್ಷಾತ್ ಜೀವಂತ ನಾಗರಹಾವು ಇರುವುದನ್ನು ಕಾಣುತ್ತೇವೆ. ಈ ಕ್ಷೇತ್ರದಲ್ಲಿ ಏನಾದರೂ ವಿಶೇಷ ಬದಲಾವಣೆಗಳಾದರೆ ಈ ನಾಗ ಇಂದಿಗೂ ದರ್ಶನವನ್ನೀಯುತ್ತದೆ. ಆದುದರಿಂದ ಈ ಪರಿಸರವನ್ನು ಪುನಃ ಐತಿಹಾಸಿಕವಾದ ನಾಗಪುರವೆಂಬ ಹೆಸರಿನಿಂದಲೇ ಕರೆಯುವುದು ಸೂಕ್ತವೆನಿಸುತ್ತದೆ. ಈ ಸಮಗ್ರ ನಾಗಬನವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಪುರ್ನ ನಿರ್ಮಿಸಿಕೊಟ್ಟಿರುತ್ತಾರೆ. ಶ್ರೀ ಗೋಪಾಲಕೃಷ್ಣ ದೇವಾಲಯ ಯಾವ ಕಾಲದಲ್ಲಿ ನಿರ್ಮಾಣವಾಯಿತೆಂಬುದನ್ನು ಈ ಶಾಸನವು ತಿಳಿಸುತ್ತದೆ. ಇದರ 12, 13 ಮತ್ತು 14ನೇ ಸಾಲುಗಳಲ್ಲಿ ಹೇಳಿರುವಂತೆ ಕೃಷ್ಣಭಟ್ಟರು ಈ ದೇವಾಲಯವನ್ನು ನಿರ್ಮಿಸಿ ಇದರಲ್ಲಿ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠಾಪಿಸಿರುತ್ತೇನೆ. ಆದುದರಿಂದ ದೇವರಿಗೆ ಅಮೃತ ಪಡಿಯ ವ್ಯವಸ್ಥೆ ಆಗಬೇಕು ಎಂದು ಕೇಳಿದರು. ಅದರ ಅನುಸಾರ ಅರಸರು ಭೂಮಿಯನ್ನು ಉಂಬಳಿ ಬಿಟ್ಟು ಶಾಲಿವಾಹನ ಶಕ 1636 ಜಯನಾಮ ಸಂವತ್ಸರದ ಚೈತ್ರ ಶುದ್ಧ ದಶಮಿಯಂದು ಈ ಶಾಸನವನ್ನು ಬರೆಸಿದ್ದರು. ಆದುದರಿಂದ ಆ ದಿನಕ್ಕಿಂತ ಸ್ವಲ್ಪ ಮೊದಲು ದೇವಾಲಯವು ಸ್ಥಾಪನೆಗೊಂಡಿರಬೇಕೆಂಬ ಅಭಿಪ್ರಾಯವನ್ನು ಈ ಶಾಸನಗಳು ನೀಡುತ್ತವೆ. ಆದುದರಿಂದ ಈ ದೇವಾಲಯದ ಐತಿಹಾಸಿಕ ಹಿನ್ನೆಲೆ ತಿಳಿಯಬೇಕೆಂಬ ಕುತೂಹಲಿಗಳಿಗೆ ಇವು ಬಹಳ ಆಕರ್ಷಕವಾದುವುಗಳು, ಅಮೂಲ್ಯವಾದುವುಗಳು. ಮಾಶತ್ರವಲ್ಲದೆ ಈ ದೇವಾಲಯದ ಭಕ್ತಾಭಿಮಾನಿಗಳೆಲ್ಲರೂ ಅಧ್ಯಯನ ಮಾಡಬೇಕಾದುವುಗಳು. ಇವೆರಡು ಸ್ವತಂತ್ರವಾದ ಎರಡು ಬೇರೆ ಬೇರೆ ತಾಮ್ರಪಟಗಳ ಮೇಲೆ ಬರೆಯಲ್ಪಟ್ಟಿವೆ.

ಇವುಗಳ ಪೈಕಿ ಒಂದನೆಯದು ಶಾಲಿವಾಹನ ಶಕ (ಒಂದು ಸಾವಿರದ ಆರುನೂರ ಮೂವತ್ತಾರು)1636ನೇಯ ಜಯನಾಮ ಸಂವತ್ಸರದ ಚೈತ್ರ ಶುದ್ಧ ದಶಮಿ ಅಂದರೆ 1714ನೇ ಇಸವಿ ಮಾರ್ಚ್ ತಿಂಗಳ 14ನೇ ತಾರೀಕಿನಂದು ಆದಿತ್ಯವಾರ ಬರೆಯಲ್ಪಟ್ಟಿತ್ತು. ಇದು ಮಧ್ಯ ಕಾಲದ ಕನ್ನಡ ಭಾಷೆ ಹಾಗೂ ಕನ್ನಡ ಲಿಪಿಯಲ್ಲಿದೆ. ಇದರಲ್ಲಿ ಒಟ್ಟು 52ಸಾಲುಗಳಿವೆ.30 ಸೆ.ಮೀ. ಎತ್ತರ ಹಾಗೂ 20.5 ಸೆ.ಮೀ. ಅಗಲ ಹಾಗೂ ಸ್ವಲ್ಪ ದಪ್ಪವಿರುವ ತಾಮ್ರ ಪಟದ ಮೇಲೆ ಇದನದನು ಬರೆಯಲಾಗಿದೆ. ಪ್ರಾರಂಭದ 32 ಸಾಲಗಳು ಎದುರು ಬಾಗದಲ್ಲಿಯೂ ಉಳಿದ 20 ಪಂಕ್ತಿಗಳು ಹಿಂಭಾಗದಲ್ಲಿಯೂ ಇವೆ. ಈ ದೇವಾಲಯದ ನಿಮಾರ್ತೃ ಕೃಷ್ಣಭಟ್ಟರು ಮೂಲ ವಂಶದ ಚನ್ನಪ್ಪ ಅರಸರಲ್ಲಿಯೂ, ಅವರ ರಾಜ್ಯದ ಪ್ರಜಾಜನರಲ್ಲಿಯೂ ವಿನಂತಿ ಮಾಡಿಕೊಂಡ ಅನುಸಾರ ಎಲ್ಲಾ ಪ್ರಜೆಗಳು ತಾವು ಅರಸರಿಗೆ ತಮ್ಮ ಭೂಮಿಯ ಸಂಬಂಧವಾಗಿ ಕೊಡಬೇಕಾಗಿದ್ದ ಭೂಕಂಧಾಯವನ್ನು ಮಾತ್ರವಲ್ಲದೆ ಇನ್ನೂ ಹೆಚ್ಚಾಗಿ ಕೆಲವು ವರಹ ಎಂಬ ಹಣವನ್ನು ಶಿವಾರ್ಪಿತವೆಂದು ಈ ದೇವಾಲಯಕ್ಕೆ ಕೊಡಲು ಒಪ್ಪಿದರು. ಹಾಗೆಯೇ ಅಮೃತಪಡಿ ಮತ್ತು ಇತರ ವಿನಿಯೋಗಾದಿಗಳಿಗಾಗಿ ಕಾವಳ, ಪಜಿರಡ್ಕ, ತಾಡಿ ಮುಂತಾದ ಮಾಗಣೆಗಳಿಂದ ಕೆಲವು ಗದ್ದೆಗಳನ್ನು ಆ ದೇವಸ್ಥಾನಕ್ಕೆ ಬಿಟ್ಟುಕೊಟ್ಟರು. ಮೂಲ ಅರಸುಮನೆತನಕ್ಕೆ ವಂಶ ಪಾರಂಪರ್ಯವಾಗಿ ಬಂದಿದ್ದ ಕೆಲವು ಮಾಗಣೆಗಳಲ್ಲಿದ್ದ ಹಲವು ಗದ್ದೆ ಕುಳಂಜಿಗಳನ್ನು ಚನ್ನಪ್ಪರಸರು ಈ ದೇವಾಲಯಕ್ಕೆ ಬಿಟ್ಟುಕೊಟ್ಟರು. ಆ ಭೂಮಿಗಳಿಗೆ ಗಡಿ ಕಲ್ಲುಗಳನ್ನು ನೆಡಿಸಿ, ಅವುಗಳನ್ನು ಹೆಸರಿಸಿ ದಾನಕೊಟ್ಟ ಆ ಭೂಮಿಗಳ ಎಲ್ಲ ವಿವರಗಳನ್ನು ಈ ಶಾಸನದಲ್ಲಿ ಬರೆಯಲಾಗಿದೆ.

ಶಾಸನದ ಕೊನೆಯ ಭಾಗದಲ್ಲಿ ತಿಳಿಸಿರುವಂತೆ ದಾನಕೊಟ್ಟಿರುವ ಈ ಭೂಮಿಯಲ್ಲಿ ನಿಧಿ, ನಿಕ್ಷೇಪ, ನೀರು, ಕಲ್ಲು, ಶಾಶ್ವತವಾಗಿರುವ ಸಂಪತ್ತು, ಮುಂದೆ ಬರುವ ಲಾಭಗಳು, ಈಗ ಇರುವ ಹಾಗೂ ಮುಂದೆ ಸಾಧ್ಯವಾಗುವ ಉತ್ಪತ್ತಿ ಮತ್ತು ಸಹಜಸಾಧ್ಯ ಸಂಪತ್ತೆಲ್ಲವನ್ನು ಗಳಿಸಿಕೊಂಡು ಅದರ ಸಹಾಯದಿಂದ ಕೃಷ್ಣಭಟ್ಟರು ವಂಶಪಾರಂಪರ್ಯವಾಗಿ ಸೂರ್ಯಚಂದ್ರರಿರುವ ತನಕ ಶಾಶ್ವತವಾಗಿ ದೇವರ ಅಮೃತ ಪಡಿಯನ್ನು ನಡೆಸಿಕೊಂಡು ಬರಬೇಕು. ಇದಕ್ಕೆ ಸುರ್ಯ, ಚಂದ್ರ, ಬೆಂಕಿ, ಆಕಾಶ, ಭೂಮಿ, ನೀರು, ಹೃದಯ,ಹಗಲು, ರಾತ್ರಿ ಮತ್ತು ಎರಡು ಸಂದ್ಯಾಕಾಲಗಳು ಎಂದು ಈ ಶಾಸನದಲ್ಲಿ ಹೇಳಲಾಗಿದೆ.

 

ದಾನ ಕೊಡುವುದು ಮತ್ತು ದಾನ ಪರಂಪರೆಯನ್ನು ಪಾಲಿಸಿಕೊಂಡು ಹೋಗುವುದರ ಪೈಕಿ ದಾನ ಕೊಡುವುದಕ್ಕಿಂತ ದಾನ ಪಾಲಿಸಿಕೊಂಡು ಹೋಗುವುದೇ ಹೆಚ್ಚು ಶ್ರೇಯಸ್ಕರ. ದಾನ ಮಾಡುವುದರಿಂದ ಸ್ವರ್ಗ ದೊರೆಯುತ್ತದೆ. ಪಾಲಿಸಿಕೊಂಡು ಹೋಗುವುದರಿಂದ ಅಚ್ಯುತ ಪದವಿಯು ಪ್ರಾಪ್ತವಾಗುತ್ತದೆ. ತಾನು ಕೊಟ್ಟಿರುವ ಅಥವಾ ಇನ್ನೊಬ್ಬರು ಕೊಟ್ಟಿರುವ ಭೂಮಿಯನ್ನು ಯಾರು ಅಪಹರಿಸುತ್ತಾರೋ ಅಂತಹವನು ಅರುವತ್ತು ಸಾವಿರ ವರ್ಷಗಳ ಕಾಲ ಮಲದಲ್ಲಿ ಕ್ರಿಮಿಯಾಗಿ ಹುಟ್ಟುತ್ತಾನೆ. ಆದುದರಿಂದ ಯಾರೂ ಈ ಭೂಮಿಯನ್ನು ಅನ್ಯರು ಅಪಹರಿಸಿ ಉಪಯೋಗಿಸಬಾರದೆಂದು ಎಚ್ಚರಿಸಲಾಗಿದೆ.

ತಾಮ್ರ ಶಾಸನ - 2

ಈ ಎರಡನೆಯ ತಾಮ್ರ ಶಾಸನವು32 ಸೆ.ಮೀ. ಎತ್ತರ, 20 ಸೆ.ಮೀ. ಅಗಲ ಮತ್ತು ತುಸು ದಪ್ಪವಿರುವ ಒಂದು ತಾಮ್ರಪಟದ ಮೇಲೆ ಒಟ್ಟು 57 ಸಾಲುಗಳಲ್ಲಿ ಬರೆಯಲ್ಪಟ್ಟಿದೆ. ತಾಮ್ರಪಟದ ಮುಂಭಾಗದಲ್ಲಿ 31 ಸಾಲುಗಳು ಮತ್ತು ಹಿಂಭಾಗದಲ್ಲಿ 26 ಸಾಲುಗಳೂ ಇವೆ. ಈ ಶಾಸನವು ಮಧ್ಯಯುಗದ ಕನ್ನಡ ಭಾಷೆ ಹಾಗೂ ಕನ್ನಡೆಯಲ್ಪಟ್ಟಿದೆ. ಆದರೆ ಒಂದನೆ ಶಾಸನದಂತೆ ಇಲ್ಲಿಯೂ ಪ್ರಾರಂಭದ ಶಿವಸ್ತುತಿ ಮತ್ತು ಕೊನೆಯಲ್ಲಿರುವ ಶ್ಲೋಕಗಳು ಸಂಸ್ಕೃತ ಭಾಷೆಯಲ್ಲಿವೆ ಕಾಗುಣಿತ ಕೆಲವು ತಪ್ಪುಗಳಿದ್ದರೂ ಈ ಶಾಸನವನ್ನು ಸುಲಭವಾಗಿ ಓದಿ ಅರ್ತ ಮಾಡಿಕೊಳ್ಳಬಹುದು. ಈ ಶಾಸನವನ್ನು ವೇಣೂರು ಅಜಿಲ ರಾಜವಂಶದ ಶಂಕರದೇವಿ ಎಂಬ ರಾಣಿ ಬರೆಸಿದ್ದಳು. ಇತಿಹಾಸದಲ್ಲಿ ತಿಳಿದು ಬರುವಂತೆ ಈ ರಾಣಿಗೆ ಪದುಮಲಾದೇವಿ ಎಂಬ ಇನ್ನೊಂದು ಹೆಸರೂ ಇತ್ತು. ಈಕೆ ಕ್ರಿ.ಶ. 1683ರಿಂದ 1721ರವರೆಗೆ ರಾಜ್ಯವಾಳಿದ್ದಳು. ಧರ್ಮಿಷ್ಟೆಯಾದ ಈಕೆ ಶಾಲಿವಾಹನ ಶಕ 1632 ಅಂದರೆ 1710ನೆಯ ಇಸವಿಯಲ್ಲಿ ವೇಣೂರಿನ ನಿರ್ವಾಣದ ಸ್ವಾಮಿಯವರ ಮಠಕ್ಕೆ ಭೂಮಿ ಉಂಬಳಿಯನ್ನು ಬಿಟ್ಟಿದ್ದರು. ಈಕೆಯ ಬಳಿಕ ಐದನೆ ತಿಮ್ಮಣ್ಣ ಅಜಿಲ ಎಂಬ ಅರಸರು ರಾಜ್ಯವಾಳಿದ್ದರು. ಈ ತಾಮ್ರ ಶಾಸನದಲ್ಲಿ ವೇಣೂರಿನ ಈ ಅಜಿಲ ಅರಸು ಮನೆತನದವರು ಚಂದ್ರವಂಶಕ್ಕೆ ಸೇರಿದವರು ಎಂದು ಹೇಳಲಾಗಿದೆ. ಅಂದಿನ ರಾಣಿ ಶಂಕರದೇವಿಯವರು ಹಿಂದಿನ 1ನೇ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟ ಗಾರ್ಗ್ಯ ಗೋತ್ರದ ಅಶ್ವಲಾಯನ ಸೂತ್ರದ ಋಕ್ ಶಾಖೆಯ ಬಾಬು (ಬಾಪು) ಭಟ್ಟರ ಮಗ ರಾಮಭಟ್ಟರ ಪುತ್ರನಾದ ಕೃಷ್ಣಭಟ್ಟರಿಗೆ ಈ ಶಾಸನವನ್ನು ಬರೆಸಿಕೊಟ್ಟಿದ್ದರು. ಈ ಶಾಸನದ 8ನೇ ಪಂಕ್ತಿಯಿಂದ 13ನೇ ಪಂಕ್ತಿಯವರೆಗೆ ಹೇಳಿರುವಂತೆ ಅದೇ ಕೃಷ್ಣಭಟ್ಟರು ಅಜಿಲರ ಸೀಮೆಯ ಸುಳಕೇರಿ ಮಾಗಣೆ ಬರಾಯ ಗ್ರಾಮದ ನಾಗಪುರದಲ್ಲಿ ಈ ದೇವಸ್ಥಾನವನ್ನು ಕಟ್ಟಿಸಿ ಶ್ರೀ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠೆ ಮಾಡಿ ದೇವರ ಪಂಚಪರ್ವ, ಕಟ್ಟುಕಟ್ಟಳೆ, ಕಂದಾಚಾರಗಳು ಸರಿಯಾಗಿ ನಡೆಯುವಂತೆ ವ್ಯವಸ್ಥೆಯಾಗಲು ಶಂಕರದೇವಿ ರಾಣಿಯವರಲ್ಲಿಯೂ ಅವರ ಸಾವಿರಾರು ಪ್ರಜೆಗಳಲ್ಲಿಯೂ ಕೇಳಿಕೊಂಢ ಅನುಸಾರ ರಾಣಿಯವರು ಸಾಕಷ್ಟು ಭೂಮಿಯ ಉಂಬಳಿಯನ್ನು ಬಿಟ್ಟು ಈ ತಾಮ್ರಶಾಸನವನ್ನು ಬರೆಸಿಕೊಟ್ಟಿದ್ದರು.

ಈ ತಾಮ್ರಶಾಸನದಲ್ಲಿ ಹೇಳಿರುವಂತೆ ಅಜಿಲರ ಪ್ರಜೆಗಳು ಅರಮನೆಗೆ ಕೊಡುವ ಭೂಕಂದಾಯದ ಜೊತೆಗೆ ಮೆಣಸಿನ ಕಂದಾಯವನ್ನು ಸೇರಿಸಿ ಅದನ್ನು ಈ ದೇವಾಲಯಕ್ಕೆ ಕೊಡುವುದಾಗಿ ಒಪ್ಪಿಕೊಂಡರು. ಮಾತ್ರವಲ್ಲದೆ ಅಜಿಲರ ಅರಮನೆಯಿಂದ ಅಳುವ (ಅರುವ) ಮಾಗಣೆ, ಸುಳಕೇರಿ ಮಾಗಣೆ, ಎರಡೂರು ಮಾಗಣೆ ಮತ್ತು ವೇಣೂರು, ಕೇಳ, ಪೆರಿಂಜ, ಯಿತವತ್ತೂರು ಮಾಗಣೆ ಮುಂತಾದ ಕಡೆಗಳಿಂದ ಕೆಲವು ಗದ್ದೆಗಳನ್ನು ಬಿಟ್ಟು ಕೊಡಲಾಯಿತು. ಮಾತ್ರವಲ್ಲದೆ ಎರಡ ಊರು ಮಾಗಣೆಯ ಸವಣಾಲು ಗ್ರಾಮ ಮತ್ತು ಪಡಂಗಡಿ ಗುತ್ತಿನಿಂದ ಬರುವ ಭೂಕಂದಾಯವನ್ನು ಅರಮನೆಯಿಂದ ಈ ದೇವಾಲಯಕ್ಕೆ ಕೊಡುವುದಾಗಿ ಒಪ್ಪಿಕೊಳ್ಳಲಾಯಿತು. ಅಡಿಕೆ ಮರಗಳಿಂದ ಬರುವ ಉತ್ಪತ್ತಿಯನ್ನು ಅಳಂಬಿಕಲ್ಲು ಎಂಬಲ್ಲಿದ್ದ ಒಂದು ಸಾವಿರ ಮರಗಳಿಗೆ ಕೊಡುವ ತೆರಿಗೆಯನ್ನು ದೇವರಿಗೆ ಬಿಟ್ಟುಕೊಡಲಾಯಿತು.

ಈ ಎಲ್ಲಾ ದಾನ ಕೊಡುಗೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲು ಅನುಕೂಲವಾಗುವಂತೆ ಈ ತಾಮ್ರಶಾಸನದ14ನೇ ಸಾಲಿನಿಂದ 49ನೆ ಸಾಲಿನವರೆಗೆ ಸ್ಪಷ್ಟವಾಗಿ ದಾಖಲಿಸಿ ಶಾಲಿವಾಹನ ಶಕ 1642 ಶಾರ್ವರಿ ಸಂವತ್ಸರದ ಚೈತ್ರ ಬಹುಳ ತದಿಗೆ ಸ್ಥಿರವಾರ (ಶನಿವಾರ) ಅಂದರೆ ಕ್ರಿ.ಶ.1720ನೇ ಇಸವಿ ಏಪ್ರಿಲ್ ತಿಂಗಳ 14ನೇ ತಾರೀಕಿನಂದು ತಾಮ್ರಶಾಸನವನ್ನು ಬರೆಸಲಾಗಿದೆ. ಈ ದಾನ ವ್ಯವಸ್ಥೆಯು ಕೆಡಬಾರದೆಂಬ ದೃಷ್ಟಿಯಿಂದ ಇತರ ಶಾಸನಗಳಲ್ಲಿ ಸಾಮಾನ್ಯವಾಗಿ ಇರುವಂತೆ ಈ ಶಾಸನದ ಕೊನೆಯಲ್ಲಿ ಈ ಧರ್ಮ ವ್ಯವಸ್ಥೆಗೆ ಸೂರ್ಯ, ಚಂದ್ರ, ವಾಯು, ಬೆಂಕಿ,

ಆಕಾಶ, ಭೂಮಿ, ನೀರು, ಹೃದಯ, ಯಮ, ಹಗಲು, ರಾತ್ರಿ, ಎರಡು ಸಂಧ್ಯಾಕಾಲಗಳು ಸಾಕ್ಷಿ ಎಂದು ಹೇಳಲಾಗಿದೆ. ದಾನ ಕೊಡುವುದು ಮತ್ತು ದಾನ ಪರಂಪರೆಯನ್ನು ಪಾಲಿಸಿಕೊಂಡು ಹೋಗುವುದರ ಪೈಕಿ ದಾನ ಕೊಡುವುದಕ್ಕಿಂತ ದಾನ ಪಾಲಿಸಿಕೊಂಡು ಹೋಗುವುದೇ ಹೆಚ್ಚು ಶ್ರೇಯಸ್ಕರ. ದಾನ ಮಾಡುವುದರಿಂದ ಸ್ವರ್ಗ ದೊರೆಯುತ್ತದೆ. ಪಾಲಿಸಿಕೊಂಡು ಹೋಗುವುದರಿಂದ ಅಚ್ಯುತ ಪದವಿಯು ಪ್ರಾಪ್ತವಾಗುತ್ತದೆ. ತಾನು ಕೊಟ್ಟಿರುವ ಅಥವಾ ಇನ್ನೊಬ್ಬರು ಕೊಟ್ಟಿರುವ ಭೂಮಿಯನ್ನು ಯಾರು ಅಪಹರಿಸುತ್ತಾರೋ ಅಂತಹವನು ಅರುವತ್ತು ಸಾವಿರ ವರ್ಷಗಳ ಕಾಲ ಮಲದಲ್ಲಿ ಕ್ರಿಮಿಯಾಗಿ ಹುಟ್ಟುತ್ತಾನೆ ಎಂದು ಎಚ್ಚರಿಸಲಾಗಿದೆ.

ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ

ಸರಿಯಾಗಿ ಒಂದು ನೂರು ವರ್ಷಗಳ ಹಿಂದೆ ಸುಮಾರು 1896ನೇಯ ಇಸವಿಯಿರಬೇಕು. ದಟ್ವವಾದ ವನಸಿರಿಯಿಂದ ಆವೃತವಾದ ಸಹ್ಯಾದ್ರಿಯ ತಪ್ಪಲಿನ ಮಾಳಗ್ರಾಮದಿಂದ ವೃರೊಬ್ಬರು ತನ್ನ ಸುಮಾರು 12ವರ್ಷ ಪ್ರಾಯದ ಉಪನೀತನಾದ ಪುತ್ರನ ಜೊತೆಗೊಂಡು ತನ್ನ ಹುಟ್ಟೂರಿಗೆ ವಿದಾಯ ಹೇಳಿ ಗೊತ್ತು ಗುರಿಯಿಲ್ಲದೆ ಹೊರಟಿದ್ದರು. ಅವರಲ್ಲಿ ಇದ್ದುದು ಉಟ್ಟ ಬಟ್ಟೆಗಳು ಮತ್ತು ಒಂದು ಕೈಚೀಲದಲ್ಲಿ ಹಿಡಿಸಬಹುದಾದಷ್ಟು ಸೊತ್ತುಗಳು ಮಾತ್ರ. ಮಾಳದಿಂದ ಹೊರಟು ಎತ್ತಿನ ಬಂಡಿಗಳು ಓಡಾಡುವ ರಸ್ತೆಯಲ್ಲಿ ನಾರಾವಿಯತ್ತ ಪಯಣಿಸುತ್ತ ಬಂದು ಸೇರಿದ್ದು ತಮ್ಮ ಸ್ವಜಾತಿ ಬಾಂಧವರು ಇರುವ ಊರು ಸೂಳಬೆಟ್ಟಿಗೆ. ದೇಶಾವರಿಗಳಂತಿದ್ದ ಇವರನ್ನು ಊರ ಹಿರಿಯರು ಸೇರಿ ವಿಚಾರಿಸಿದಾಗ ತಿಳಿದು ಬಂದದ್ದು ಇಷ್ಟು. ಜೀವನದಲ್ಲಿ ಕಷ್ಟ ನಷ್ಟಗಳಿಗೆ ನೊಂದು ಬೆಂದು, ಹೆಚ್ಚು ಕಡಿಮೆ ಸರ್ವಸ್ವವನ್ನು ಕಳಕೊಂಡು ಹೊಸ ಚರಿತಾರ್ಥವನ್ನು ಹುಡುಕಿಕೊಂಡು ಈ ತಂದೆ ಮಗ ಹೊರಟಿದ್ದರು. ಜೀವನದಲ್ಲಿ ನೊಂದ ಹಿರಿಯರು ಮಾನಸಿಕ ಸ್ವಾಸ್ಥ್ಯವನ್ನು ಕಳಕೊಂಡು ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಹುಡುಗ ಎಲ್ಲವನ್ನೂ ಬಿಚ್ಚಿಟ್ಟ. ಆಗ ಹಿರಿಯರಿಗೆ ಹೊಳೆದದ್ದು ತಮ್ಮ ಊರಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಿಚಾರ.

ಆಗ ಈ ದೇವಾಲಯದ ಸ್ಥಿತಿಯೂ ಈ ದೇಶಾವರಿಗಳ ಸ್ಥಿತಿಗೆ ಸಾದೃಶ್ಯವಾಗಿಯೇ ಇತ್ತು. ಆ ವೇಳೆಗೆ ಸುಮಾರು 200 ವರ್ಷಗಳ ಹಿಂದೆ, 18ನೆಯ ಶತಮಾನದ ಪ್ರಾರಂಭದಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಿಂದ ವಲಸೆ ಬಂದ ಚಿತ್ಫಾವನ ಬ್ರಾಹ್ಮಣ ಕುಟುಂಬಗಳ ಪೈಕಿ ಈಗಿನ ಉಲ್ಫೆ ಎಂಬಲ್ಲಿ ನೆಲೆನಿಂತ ಗಾಡಗೀಳ ವಂಶದ ಶ್ರೋತ್ರೀಯ ಬ್ರಾಹ್ಮಣ ಕೃಷ್ಣಭಟ್ಟ ಎಂಬವರಿಂದ ಸ್ಥಾಪಿತವಾದುದೆಂದು ಹೇಳಲಾದ ಈ ದೇವಾಲಯವು ತುಂಬ ಶಿಥಿಲ ಸ್ಥಿತಿಯಲ್ಲಿತ್ತು. ಒಂದೊಮ್ಮೆ ವರ್ಷಾವಧಿ ಜಾತ್ರೆ ಉತ್ಸವಾದಿಗಳಲ್ಲಿ ಎಲ್ಲಾ ಸಾಮಾಜಕರು ಸೇರುವ ಪ್ರಮುಖ ಕೇಂದ್ರವಾಗಿದ್ದ ಇದು ಕಾಲಕ್ರಮದಲ್ಲಿ ಅವನತಿಗೆ ಒಳಗಾಗಿ ಈ ವೇಳೆಗೆ ದೇವಾಲಯದ ಸುತ್ತಲಿನ ಪೌಳಿಗಳೂ ಬಿದ್ದುಹೋಗಿ ಅದರ ಮೇಲೆ ಗಿಡಕಂಟಿಗಳು ಬೆಳೆದಿದ್ದವು. ದೇವಾಲಯದ ಮುಂಭಾಗದ ಚಾವಡಿ (ಗೋಪುರ) ಮತ್ತು ಶಿಲಾನಿರ್ಮಿತ ಗರ್ಭಗುಡಿಗೆ ಮುಳಿ ಹುಲ್ಲಿನ ಹೊದಿಕೆ ಇತ್ತು. ನಿತ್ಯಪೂಜೆಗೆ ಹೇಳಿಕೊಳ್ಳುವ ವ್ಯವಸ್ಥೆ ಏನೂ ಇರಲಿಲ್ಲ. ಆಸುಪಾಸಿನ ಬ್ರಾಹ್ಮಣರು ಯಾರಾದರೂ ಬಂದು ಪೂಜೆ ಮಾಡಿದರೆ ಉಂಟು, ಇಲ್ಲದಿದ್ದರೆ ಇಲ್ಲ ಎಂಬ ಸ್ಥಿತಿಯಿತ್ತು.

 

ಹಿರಿಯರು ಯೋಚಿಸಿದರು. ಈ ತಂದೆ ಮಗನನ್ನು ಪೂಜೆಗೆ ನೇಮಿಸಿಕೊಂಡರೆ ಹೇಗೆ?ವಿಚಾರಿಸಿದರು. ವೃದ್ಧರು ನಿಖರವಾಗಿ ಏನೂ ಹೇಳರು. ಹುಡುಗ ನಾನು ಮಾಡುತ್ತೇನೆ ಅಂದ. ಆದರೆ ಆತನನ್ನು ಪರೀಕ್ಷಿಸಲು ಪೂಜಾ ವಿಧಿಗಳ ಪೂರ್ಣಜ್ಞಾನ ಇರಲಿಲ್ಲ. ಮುಂದಿನ ಆರು ತಿಂಗಳಲ್ಲಿ ಆವಶ್ಯಕ ಪೂಜಾ ವಿಧಿಗಳನ್ನು, ಮಂತ್ರಗಳನ್ನೂ ಕಲಿತುಕೊಳ್ಳುವ ಶರ್ತದ ಮೇಲೆ ಆತನ ನೇಮಕವಾಯಿತು. ಸೂಳಬೆಟ್ಟು, ಫಂಡಿಜೆ, ಕುದ್ಯಾಡಿ, ಕಾಜಿಮುಗೇರುಗಳಲ್ಲಿ ಪಾರಂಪರಿಕ ಭಜಕರೆಲ್ಲ ಸೇರಿ ಅಮೃತ ಪಡಿ, ನಂದಾ ದೀಪಕ್ಕೆ ಬೇಕಾದ ಎಣ್ಣೆ, ನೈವೇದ್ಯಕ್ಕೆ ಬೇಕಾದ ಅಕ್ಕಿ ಮುಂತಾದ ವ್ಯವಸ್ಥೆಗಳನ್ನು ಮಾಡಿದರು. ಈ ಪುಟ್ಟ ಅರ್ಚಕ ವಾರಕ್ಕೊಮ್ಮೆ ನಿಗದಿತ ಮನೆಗಳಿಗೆ ಹೋಗಿ ಅಕ್ಕಿ, ಎ ಣ್ಣೆ ಗಳನ್ನು ಸಂಗ್ರಹಿಸಿ ತರಬೇಕಾಗಿತ್ತು.

ಈ ಘಟನೆಯು ದೇವಸ್ಥಾನದ ಅಭಿವೃದ್ಧಿಯಲ್ಲಿ ಉತ್ತಮ ತಿರುವನ್ನೇ ನೀಡಿತು. ಹೀಗೆ ಪ್ರಾರಂಭವಾದ ಪೂಜಾ ವ್ಯವಸ್ಥೆ ಇದು ತನಕವೂ ಅನುಚಾನವಾಗಿ ನಡೆದುಕೊಂಡು ಬಂದಿದೆ. ಮುಂದೆ ಮೆಹೆಂದಳೆ ರಾಮಕೃಷ್ಣ ಭಟ್ಟರು ಎಂದೇ ಪ್ರಸಿದ್ಧಿ ಪ ಡೆದ ಈ ಬಾಲಕನೇ ನಿರಂತರ 30 ವರ್ಷಗಳ ಕಾಲ ದೇವಾಲಯದಲ್ಲಿ ನಿತ್ಯಪೂಜಾ ಕೈಂಕರ್ಯಗಳನ್ನು ನೆರವೇರಿಸಿದ.ಅಂದಾಜು 1926ರಲ್ಲಿ ಮೆಹೆಂದಳೇ ರಾಮಕೃಷ್ಣಭಟ್ಟರು ಪೂಜೆ ಬಿಟ್ಟಾಗ ಸೂಳಬೆಟ್ಟು ವಾಳ್ಯದ ಜೋಶಿ ಬಾಲಕೃಷ್ಣ ಭಟ್ಟರು ಪೂಜೆಗೆ ನೇಮಕಗೊಂಡರು. ಅಂದಿನಿಂದ ಸುದೀರ್ಘ ಅವಧಿಯವರೆಗೆ ಈ ಮನೆತನದವರು ಪೂಜಾ ವಿಧಿಗಳನ್ನು ನಡೆಸಿಕೊಂಡು ಬಂದಿದ್ದಾರೆ. ನಿತ್ಯ ಪೂಜೆಯ ಪ್ರಾರಂಭದೊಂದಿಗೆ ದೇವಾಲಯದ ಅಭಿವೃದ್ಧಿಯ ಕುರಿತು ಭಜಕರು ಯೋಚಿಸಬೇಕಾಯಿತು. ಊರ ಹಿರಿಯರೆಲ್ಲ ಸೇರಿ ಮುಂದಾದರು. ನಿಧಾನಗತಿಯಿಂದಲಾದರೂ ಮುಂದಿನ ಹತ್ತು ವರ್ಷಗಳಲ್ಲಿ ದೇವಳದ ಮೂರು ಸುತ್ತಿನ ಪೌಳಿಗಳು ಎದ್ದು ನಿಂತು ಮಂಗಳೂರು ಹಂಚಿನ ಹೊದಿಕೆಯನ್ನು ಕಂಡವು. ಮುಂಭಾಗದ ಗೋಪುರ ಹಾಗೂ ಗರ್ಭಗುಡಿಗಳ ಮಾಡಿನ ಮುಳಿಹುಲ್ಲು ಮಾಯವಾಗಿ 1907ರ ವೇಳೆಗೆ ಮಂಗಳೂರು ಹಂಚಿನ ಮಾಡು ಕಂಗೊಳಿಸಿತು. ದೇವಾಲಯದ ಪಶ್ಚಿಮ ಭಾಗದಲ್ಲಿ (ಹಿಂಭಾಗ) ಪಾಕಶಾಲೆಯ ನಿರ್ಮಣವಾಯಿತು. ಅದರಲ್ಲೇ ಅರ್ಚಕರಿಗೂ ವಾಸಕ್ಕೆ ವ್ಯವಸ್ಥೆ ಮಾಡಲಾಯಿತು. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಫಲಶ್ರುತಿಯಾಗಿ ಶ್ರೀ ಗೋಪಾಲಕೃಷ್ಣ ದೇವರಿಗೆ ಬ್ರಹ್ಮಕಲಾಶಿಭಿಷೇಕವೂ ನಡೆಯಿತು. ಎಂದೋ ನಿಂತು ಹೋಗಿದ್ದ ರಥೋತ್ಸವಕ್ಕೆ ಬದಲಾಗಿ ಪ್ರತಿ ವರ್ಷ ಕಾರ್


ಪೂಜಾ ವಿಧಾನ ಮತ್ತು ಉತ್ಸವಗಳು ಸ್ತೋತ್ರ ಮತ್ತು ಭಜನೆಗಳು ಗ್ಯಾಲರಿ