ದೇವಾಲಯಗಳು

ಶ್ರೀ ಭವಾನಿ ಭೂತೇಶ್ವರ (ಭವಾನಿ ಶಂಕರ) ದೇವಸ್ಥಾನ

ಹಿಂದೆ ಓದಿ

ಶ್ರೀ ಹನುಮಾನ್ ದೇವಸ್ಥಾನದ ಸಮೀಪ ಬಾರಭಾಯಿ, ಪಾಲ್ ಶೇತ್, ಗುಹಾಗರ ತಾಲೂಕು, ರತ್ನಾಗಿರಿ ಜಿಲ್ಲೆ, ಮಹಾರಾಷ್ಟ್ರ.ಮಹಾರಾಷ್ಟ್ರದ ರತ್ನಾಗಿರಿಯ ಹತ್ತಿರ ಕೇಳ್ಶೆ-ಮಾಜ್ ಗಾಂ ಸಡ್ಯೆ-ಪಿರಂದವಣೆ ಈ ಊರುಗಳು ಇರುತ್ತವೆ. ಪಾಲ್ ಶೇತ್ ಎಂಬುದು ಗುಹಾಗರ್ ಎಂಬ ಊರಿನ ಹತ್ತಿವಿರುತ್ತದೆ. ಈ ಊರುಗಳು ಡೋಂಗರೆ ಕುಲಬಾಂಧವರ ಮೂಲಸ್ಥಾನಗಳೆಂದೂ, ನೂರಾರು ವರ್ಷಗಳಿಂದಲೂ ಇಲ್ಲಿ ಡೋಂಗರೆ ವಂಶಜರು ವಾಸವಾಗಿದ್ದರೆಂದು ತಿಳಿಯಲಾಗಿದೆ. 1943ಮತ್ತು 1999ರಲ್ಲಿ ಮುದ್ರಿಸಿರುವ ಡೋಂಗರೆ ವಂಶವೃಕ್ಷದಲ್ಲಿರುವ ಮಾಹಿತಿ, ಕೆಲವಾರು ಐತಿಹಾಸಿಕ ಆಧಾರಗಳು, ದೇವಸ್ಥಾನಗಳು ಮತ್ತು ಜಮೀನುಗಳ ದಾಖಲೆಗಳಿಂದ ವಿಪುಲವಾದ ಮಾಹಿತಿಗಳು ಸಿಕ್ಕಿರುತ್ತವೆ. ಕೆಲವಾರು ದಶಕಗಳಿಂದ ಡೋಂಗರೆ ಕುಲಬಾಂಧವರ ಕುಲದೈವವಾದ ಭವಾನಿಶಂಕರನ ಮೂಲಸ್ಥಾನವನ್ನು ತಿಳಿದುಕೊಳ್ಳುವಲ್ಲಿ ನಿರ್ಮಾಣವಾದ ಸಂದಿಗ್ಧತೆಯನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಶಾಂಡಿಲ್ಯ ಗೋತ್ರೋದ್ಭವರಾದ ಡೋಂಗ್ರೆ ಕುಲನಾಮವುಳ್ಳ ಚಿತ್ಪಾವನರ ಕುಲದೇವರು ಯಾರು? ಈವರೆಗೆ ನಂಬಿಕೊಂಡಿರುವ ‘ಭವಾನಿಶಂಕರ’ನೇ ಹೌದೇ? ಹೌದಾದಲ್ಲಿ ಮೂಲಕುಲದೇವರ ದೇವಾಲಯ ಎಲ್ಲಿದೆ? ಎಂಬಿತ್ಯಾದಿಯಾಗಿ ಗೊಂದಲಗಳು, ಸಂದೇಹಗಳು ಡೋಂಗರೆ ಕುಲಬಾಂಧವರಿಗಿದ್ದವು ಇದ್ದವು.

ಈ ಸಂದೇಹ ಮತ್ತು ಗೊಂದಲಗಳೆಲ್ಲ ಇದೀಗ ಕಳೆದು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಗುಹಾಗರ ತಾಲೂಕಿನ ಪಾಲ್ ಶೇತ್ ಬಾರಭಾಯಿಯಲ್ಲಿರುವ ಶ್ರೀ ಹನುಮಾನ್ ದೇವಸ್ಥಾನದ ಬಳಿಯ ಪುರಾತನ ಶ್ರೀ ಭವಾನಿ ಭೂತೇಶ್ವರನೇ (ಭವಾನಿ ಶಂಕರ) ಡೋಂಗ್ರೆ ಕುಲಬಾಂಧವರ ಕುಲದೇವತೆಯೆಂದು ನಿರ್ಣಯಿಸಲಾಗಿದ್ದು ಈ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮಗಳು ಜಯನಾಮ ಸಂ||ರದ ವೈಶಾಖ ಬ|| ಏಕಾದಶಿ, ದ್ವಾದಶಿ ಮತ್ತು ತ್ರಯೋದಶಿಯಂದು (24-ಶನಿವಾರ, 25-ಭಾನುವಾರ, ಮತ್ತು 26- ಸೋಮವಾರ, ಮೇ -2014 ರಂದು ) ಪೂರ್ವ ಸಂಕಲ್ಪದಂತೆ ಅತ್ಯಂತ ವಿಜೃಂಭಣೆಯಿಂದ ಜರುಗಿದವು.

ಕುಲಬಾಂಧವರಿಂದ ತನು-ಮನ-ಧನಗಳ ಸಹಾಯವು ಸಕಾಲಕ್ಕೆ ಒದಗಿ ಬಂದುದರಿಂದ ನಿಯೋಜಿತ ಕಾಮಗಾರಿಗಳು ನಡೆದು ದೇವಾಲಯವು ಇದೀಗ ಕುಲಬಾಂಧವರು ಮತ್ತು ಭಕ್ತರ ದರ್ಶನಕ್ಕೆ ತೆರೆದುಕೊಂಡಿದೆ. ಈ ದೇವಾಲಯದಲ್ಲಿ ಶ್ರೀ ಗಣಪತಿ, ಶ್ರೀ ಭವಾನಿ, ಶ್ರೀ ಶಂಕರ (ಈಶ್ವರ) (ಮಹಾರಾಷ್ಟ್ರದಲ್ಲಿ ಪ್ರಾಚೀನಕಾಲದಿಂದಲೂ ಈಶ್ವರನನ್ನು ಶ್ರೀ ಭೂತೇಶ್ವರನೆಂದು ಕರೆಯುವುದು ವಾಡಿಕೆ) ಶ್ರೀ ವಿಷ್ಣು, ನಂದಿ ಮೊದಲಾದ ದೇವರ ಪ್ರತಿಷ್ಠೆಯನ್ನು ಧಾರ್ಮಿಕ ವಿಧಿ-ವಿಧಾನಗಳಿಂದ ಮಾಡಲಾಗಿದೆ.

ಚಿಪಳೂಣ್ -ಗುಹಾಗರ್ ಮಾರ್ಗದಲ್ಲಿ ಗುಹಾಗರದಿಂದ ಅಂದಾಜು 6 ಕಿ.ಮೀ. ದೂರದಲ್ಲಿ ಮೊಡಕ ಆಗರ ಎಂಬ ಊರು ಇದೆ. ವೇ ಳಣೇಶ್ವರಕ್ಕೆ ಹೋಗುವ ದಾರಿಯಲ್ಲಿ ಅಂದಾಜು 5ಕಿ.ಮೀ. ಅಂತರದಲ್ಲಿ ಪಾಲ್ ಶೇತ್ ಎಂಬ ನಿಸರ್ಗ ರಮಣೀಯವಾದ ಊರೊಂದಿದೆ. ಕರಾವಳಿಗೆ ತಾಗಿಕೊಂಡಂತೆ ಇರುವ ಈ ಊರಿನ ಬಾರಭಾಯಿ ಎಂಬ ಸ್ಥಳಕ್ಕೆ ತಲುಪಿದಾಗ ಝೋಲಾಯಿ ದೇವಿಯ ದೇಗುಲವು ಕಂಡು ಬರುತ್ತದೆ.

ಈ ದೇಗುಲದ ಪರಿಸರದಲ್ಲಿ ರವಳನಾಥ ಮತ್ತು ಇನ್ನಿತರ ಗ್ರಾಮ ದೇವರ ದೇವಾಲಯಗಳು ಕಾಣಸಿಗುತ್ತವೆ. ಈ ದೇವಾಲಯಗಳ ಹತ್ತಿವೇ ಕೈ.ಶ್ರೀ ನಾರಾಯಣ ಕೇಶವ ಡೋಂಗರೆ ಇವರ ಆಸ್ಥಿಯಲ್ಲಿರುವ ಶ್ರೀ ಗಣಪತಿ, ಶ್ರೀ ದುರ್ಲಭೇಶ್ವರ, ಈಶ್ವರ ಮತ್ತು ವಿಠೋಬಾ-ರಕುಮಾಯಿ ದೇವಾಲಯಗಳಿವೆ. ಶ್ರೀ ದುರ್ಲಭೇಶ್ವರ ದೇವಸ್ಥಾನವು ತುಂಬಾ ಪ್ರಾಚೀನವಾಗಿದ್ದು ಈ ದೇವಸ್ಥಾನಗಳ ನೋಂದಣಿಗಳ ಪುರಾವೆಗಳಲ್ಲಿ ಕ್ರಮಾಂಕ 930ರ ಪ್ರಕಾರಸರಕಾರಿ ವರ್ಷಾಸನ ಸನದು ಕ್ರಮಾಂಕ 893ರ ಪ್ರಕಾರ 10 ಸೆಪ್ಟೆಂಬರ್ 1894ರಲ್ಲಿ ಶ್ರೀ ನಾರಾಯಣ ಕೇಶವ ಡೋಂಗರೆ ಇವರ ಹೆಸರಿನಲ್ಲಿರುವ ಸರಕಾರದ ದಸ್ತಾವೇಜುಗಳಲ್ಲಿ ಗುಹಾಗರದ ತಹಶೀಲ್ದಾರರ ಕಾರ್ಯಾಲಯದಲ್ಲಿ ನೋಂದಣಿಯಾಗಿರುವುದು ಕಂಡುಬರುತ್ತದೆ. ಅನಾದಿ ಕಾಲದಿಂದಲೂ ಆಂಜನೇಯ ಸ್ವಾಮಿಯ ದೇವಾಲಯವು ಉತ್ತರ ದಕ್ಷಿಣಾಭಿಮುಖವಾಗಿ ಇರುವುದು ತಮಗೆಲ್ಲ ತಿಳಿದ ವಿಷಯವೇ ಆಗಿದೆ. ಬಾರಭಾಯಿಯಲ್ಲಿರುವ ಈ ಆಂಜನೇಯ ದೇವಾಲಯದ ಬಳಿ ಡೋಂಗರೆ, ಪಾವಗಿ, ಪಳಣೀಟ್ಕರ್, ಶಿದೊರೆ ಮತ್ತು ಶಿಧೋರೆ ಕುಲಬಾಂಧವರು ಸ್ವಇಚ್ಛೆ ಯಿಂದ ಸಂಗ್ರಹಿಸಿದ ನಿಧಿಯಿಂದ ಶ್ರೀ ಭವಾನಿ ಭೂತೇಶ್ವರ ಮಂದಿರ ಚಾರಿಟೆಬಲ್ ಟ್ರಸ್ಟ್ ನ ವತಿಯಿಂದ ಶ್ರೀ ಭವಾನಿ ಶಂಕರ (ಭವಾನಿ ಭೂತೇಶ್ವರ) ದೇವಾಲಯವನ್ನು ನಿರ್ಮಿಸುವ ಸಂಕಲ್ಪವನ್ನು ಮೇ 13, 2013ರಂದು ಮಾಡಲಾಯಿತು.

ಡೋಂಗರೆ ಕುಲಬಾಂಧವರು ಮತ್ತು ಕರ್ನಾಟಕದ ಎಲ್ಲ ಚಿತ್ಪಾವನ ಬಂಧುಗಳು ಶ್ರೀ ಭವಾನಿ ಭೂತೇಶ್ವರ (ಭವಾನಿ ಶಂಕರ) ದೇವಸ್ಥಾನವನ್ನು ಸಂದರ್ಶಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಲಾಗಿದೆ. ದೇವಸ್ಥಾನದ ಅಭಿವೃದ್ಧಿಯಲ್ಲಿ ತಮ್ಮ ಉಪಯುಕ್ತ ಸಲಹೆ-ಸೂಚನೆಗಳನ್ನು ನೀಡಬಹುದಾಗಿದೆ.. ವಿಶೇಷ ಮಾಹಿತಿಗೋಸ್ಕರ ಇವರನ್ನು ಸಂಪರ್ಕಿಸಿ :
ಶ್ರೀ ವಿಜಯ ಡೋಂಗರೆ, ಪುಣೆ –
(09850717676/ dongare.vijy@gmail.com)
ಶ್ರೀ ಚಂದ್ರಕಾಂತ ಡೋಂಗರೆ – ಪುಣೆ
(098909 60685)
ಶರದ್ ಡೋಂಗರೆ - ಪುಣೆ (098605 64588)
ಅನಿಲ್ ಕುಮಾರ್ ಡೋಂಗರೆ – ಪುಣೆ
(095279 05633)


ಪೂಜಾ ವಿಧಾನ ಮತ್ತು ಉತ್ಸವಗಳು ಸ್ತೋತ್ರ ಮತ್ತು ಭಜನೆಗಳು ಗ್ಯಾಲರಿ