ಬರಯ ಶ್ರೀ ಗೋಪಾಲಕೃಷ್ಣ ದೇವಾಲಯ
ನೋಡಿದೊಡನೆ ತನ್ನತ್ತ ಆಕರ್ಷಿಸುವ ಈ ದೇವಾಲಯವು ಜೀರ್ಣೋದ್ಧಾರದಿಂದಾಗಿ ಸುದೃಢಗೊಳ್ಳುವುದರೊಂದಿಗೆ ಪುನರ್ನಿರ್ಮಾಣಗೊಂಡ ನಾಗಬನ, ಅಶ್ವತ್ಥಕಟ್ಟೆ, ಕೊಡಮಣಿತ್ತಾಯ ದೈವಸ್ಥಾನ, ವಸಂತ ಮಂಟಪ, ಸುತ್ತಲಿನ ಪೌಳಿಗಳು, ಕಾರ್ಯಾಲಯ, ಪಾಕಶಾಲೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತವೆನಿಸುವ ಸಭಾಂಗಣ, ಸಂಗ್ರಾಹಣಾ ಕೊಠಡಿ, ಆಕರ್ಷಕವಾದ ಗೋಪುರ, ಧ್ವಜಸ್ತಂಭ ಇತ್ಯಾದಿ ಅಗತ್ಯದ ಎಲ್ಲ ಪರಿಕರಗಳನ್ನು ಈಗ ಪಡೆದುಕೊಂಡಿದೆ. ಬಹಳ ಹಿಂದಿನ ಕಾಲದಿಂದ ಮುಳಿಹುಲ್ಲಿನ ಮಾಡನ್ನು ಹೊಂದಿದ್ದರೂ ಈ ಶತಮಾನದ ಪ್ರಾರಂಭದಲ್ಲೊಮ್ಮೆ ಈ ದೇವಾಲಯಕ್ಕೆ ಸಂಬಂಧಿಸಿದ ಚಿತ್ಪಾವನ ಬ್ರಾಹ್ಮಣ ಕುಟುಂಬಗಳಿಂದ ಅಜಿಲರ ಅರಮನೆಯ ಸಹಕಾರದೊಂದಿಗೆ ಜೀರ್ಣೋದ್ಧಾರಗೊಂಡು ಶಿಲಾಮಯ ಗರ್ಭಗೃಹವನ್ನು ಪಡೆದುಕೊಂಡಿತು. ಈ ಗರ್ಭಗೃಹವು ಪ್ರಾಂಗಣ ಮಟ್ಟದಿಂದ ಸ್ವಲ್ಪ ಎತ್ತರವಾಗಿ ನಿಂತಂತಿದ್ದು ಫಕ್ಕನೆ ವೀಕ್ಷಕರ ಗಮನ ಸೆಳೆಯುತ್ತದೆ. ಈ ಶಿಲಾಮಯ ರಚನೆಯಿಂದಾಗಿ ಇದು ಹಲವಾರು ಶತಮಾನಗಳಷ್ಟು ಪ್ರಾಚೀನವಾದ ದೇವಾಲಯವಾಗಿರಬಹುದೇ ಎಂಬ ಸಂಶಯವೂ ಬರುತ್ತದೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಇದು ಎರಡುವರೆ ಶತಮಾನಗಳ ಹಿಂದೆ ಕಟ್ಟಲ್ಪಟ್ಟ ಅರ್ವಾಚೀನ ದೇವಾಲಯ.
ಶ್ರೀ ಹರಿಹರೇಶ್ವರ ದೇವಸ್ಥಾನ ದುರ್ಗ,ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ – 574121
ಇಂತಹ ದುರ್ಗಮ ಪ್ರದೇಶದಲ್ಲಿ ಮಹಾರಾಷ್ಟ್ರದ ರತ್ನಾಗಿರಿ, ಚಿಪ್ಳೂಣ್ ಮುಂತಾದ ಕೊಂಕಣ ಪಟ್ಟಿಯ ಪ್ರದೇಶದಿಂದ ವಲಸೆ ಬಂದು ಅಡಿಕೆ ಕೃಷಿಯನ್ನು ಅವಲಂಬಿಸಿ ನೆಲೆನಿಂತ ಚಿತ್ಪಾವನರು (ಕೋಕಣಸ್ಥರು) ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಅವಶ್ಯಕತೆಗಳಿಗಾಗಿ ಹುಟ್ಟು ಹಾಕಿದ ಶ್ರದ್ಧಾ ಕೇಂದ್ರವೇ ಶ್ರೀ ಹರಿಹರೇಶ್ವರ ದೇವಸ್ಥಾನ. ಸುಮಾರು 300 ವರ್ಷಗಳ ಹಿಂದೆ ಸ್ಥಾಪನೆಯಾದ ಈ ದೇವಸ್ಥಾನವು ಚಿತ್ಪಾವನ ಜನಸಮುದಾಯದ ದೇವಸ್ಥಾನಗಳಲ್ಲೇ ಪ್ರಪ್ರಥಮವಾಗಿ ಸ್ಥಾಪಿಸಲ್ಪಟ್ಟದ್ದಾಗಿದೆ. ಇಲ್ಲಿ ಹರಿಹರರನ್ನು ಆರಾಧಿಸಿಕೊಂಡು ಬಂದಿರುವುದರಿಂದ ದ್ವೈತಾದ್ವೈತ ಸಂಘರ್ಷಗಳಾಗಲೀ, ಹರಿಹರರಲ್ಲಿ ಭೇದ ಮುಂತಾದ ಕಲಹಗಳಿಗೆ ಆಸ್ಪದವೀಯದೆ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಂತಿರುವ ಶ್ರೀ ಹರಿಹರೇಶ್ವರನು ಭಕ್ತರ ಕಾಮಧೇನುವಾಗಿ ನೆಲೆನಿಂತಿದ್ದಾನೆ.
ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ, ಅಂಚೆ : ಮಾಳ - ೫೭೪೧೨೨ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
ಮಧ್ಯಾಹ್ನದ ಪೂಜೆಯು ಏಕಾವರ್ತನ ರುದ್ರಾಭಿಷೇಕದೊಂದಿಗೆ ಷೋಡಶೋಪಚಾರಪೂರ್ವಕವಾಗಿ ನಡೆಯುತ್ತದೆ. ಕಾಲಾನುಸಾರ ಲಭ್ಯವಿರುವ ಹೂಗಳಿಂದ ದೇವರನ್ನು ಶೃಂಗರಿಸಲಾಗುತ್ತದೆ. ಮಧ್ಯಾಹ್ನ ದೇವರಿಗೆ ಅರ್ಚಕರೇ ತಯಾರಿಸಿದ ಅನ್ನದ ನೈವೇದ್ಯವಿರುತ್ತದೆ. ನೈವೇದ್ಯದ ನಂತರ ವೈಶ್ವದೇವ ಕೂಡ ನಡೆಸುತ್ತಾರೆ. ಸಂಜೆ ಪುನಃ ಗುಡಿಯನ್ನು ಪ್ರವೇಶಿಸಿದ ಅರ್ಚಕರು ನಂದಾದೀಪಗಳು ಸುವ್ಯವಸ್ಥಿತವಾಗಿ ಉರಿಯುತ್ತಿವೆಯೇ ಎಂಬುದನ್ನು ಗಮನಿಸಿ ಶಂಖನಾದಗೈದು ಜಾಗಟೆಯನ್ನು ಬಾರಿಸುತ್ತಾರೆ. ತುಲಸಿಗೆ ದೀಪವಿರಿಸುವುದು, ಭೂತಾಲಯದಲ್ಲಿ ದೀಪವನ್ನು ಇರಿಸಿ ನಮಸ್ಕರಿಸುತ್ತಾರೆ. ಸಾಯಂ ಪೂಜೆಯಲ್ಲಿ ದೇವರಿಗೆ ಅಭಿಷೇಕವಿರುವುದಿಲ್ಲ. ವಿಷ್ಣುಸಹಸ್ರನಾಮ ಸಹಿತ ಪಂಚೋಪಚಾರ ಪೂಜೆಯಿರುತ್ತದೆ. ಸಂಜೆ ಪೂಜೆಯಲ್ಲಿ ದೇವರಿಗೆ ತೆಂಗಿನಕಾಯಿ ಮತ್ತು ಹಾಲುಗಳ ನೈವೇದ್ಯವಿರುತ್ತದೆ. ಈ ಪೂಜೆಯೊಂದಿಗೆ ದೈನಂದಿಕ ಪೂಜಾಕೈಂಕರ್ಯ ಮುಕ್ತಾಯಗೊಳ್ಳುತ್ತದೆ.
ಶ್ರೀ ಭವಾನಿ ಭೂತೇಶ್ವರ (ಭವಾನಿ ಶಂಕರ) ದೇವಸ್ಥಾನ
ಶ್ರೀ ಹನುಮಾನ್ ದೇವಸ್ಥಾನದ ಸಮೀಪ ಬಾರಭಾಯಿ, ಪಾಲ್ ಶೇತ್, ಗುಹಾಗರ ತಾಲೂಕು, ರತ್ನಾಗಿರಿ ಜಿಲ್ಲೆ, ಮಹಾರಾಷ್ಟ್ರ. ಮಹಾರಾಷ್ಟ್ರದ ರತ್ನಾಗಿರಿಯ ಹತ್ತಿರ ಕೇಳ್ಶೆ-ಮಾಜ್ ಗಾಂ ಸಡ್ಯೆ-ಪಿರಂದವಣೆ ಈ ಊರುಗಳು ಇರುತ್ತವೆ. ಪಾಲ್ ಶೇತ್ ಎಂಬುದು ಗುಹಾಗರ್ ಎಂಬ ಊರಿನ ಹತ್ತಿವಿರುತ್ತದೆ.