ಕೇಶವರಾವ್ ಚಿಪಳೂಣ್ಕರ್ಸೇವಾ ಕ್ಷೇತ್ರ

ಕೇಶವರಾವ್ ಚಿಪಳೂಣ್ಕರ್

ಹಲವೊಂದು ಸಲ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಬದುಕನ್ನು ರೂಪಿಸಿಕೊಳ್ಳುವುದೇ ಒಂದು ಸಾಧನೆಯಾಗುತ್ತದೆ. 1950ರ ಆಸುಪಾಸಿನ ನಮ್ಮ ಚಿತ್ಪಾವನ ಸಮುದಾಯದ ಜೀವನದ ಹೋರಾಟವನ್ನು ನೆನೆಸಿಕೊಂಡಾಗ ನಾವಿಂದು ಎಷ್ಟು ಸುಖಿಗಳು ಅನ್ನುವುದು ನಮಗರ್ಥವಾಗುತ್ತದೆ. ಆಗೆಲ್ಲ ಮೆಟ್ರಿಕ್ಯುಲೇಷನ್ ವರೆಗಿನ ಸೀಮಿತ ವಿದ್ಯಾಭ್ಯಾಸವನ್ನು ಮುಗಿಸಿ ಬೆಂಗಳೂರು, ಮುಂಬಯಿಯಂತಹ ಮಹಾನಗರಗಳಲ್ಲಿ ತಮ್ಮ ಬದುಕಿನ ನೆಲೆಯನ್ನು ಕಂಡು ಕೊಂಡವರು ಹಲವು ಮಂದಿ. ಅಂತಹ ಸಾಹಸಿಗಳಲ್ಲಿ ಶ್ರೀ ಕೇಶವರಾವ್ ಚಿಪಳೂಣ್ಕರ್ ಕೂಡ ಒಬ್ಬರು.

ಮುಂದೆ ಓದಿ


ಪ್ರೊ. ಎನ್. ಜಿ. ಪಟ್ವರ್ಧನ್ಸಾಹಿತ್ಯ

ಪ್ರೊ. ಎನ್. ಜಿ. ಪಟ್ವರ್ಧನ್

1970ರಲ್ಲಿ ಮಂಗಳೂರಿನ ಕಿರಿಯ ತಾಂತ್ರಿಕ ಶಾಲೆಯಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವಾ ವೃತ್ತಿಯನ್ನು ಪ್ರಾರಂಭಿಸಿ 1971ರಿಂದ 2001ರವರೆಗೆ ಉಜಿರೆಯ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ಕನ್ನಡ ಭಾಷಾ ಉಪನ್ಯಾಸಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಮೂವತ್ತು ವರುಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿ 2001ರಲ್ಲಿ ಸೇವಾ ನಿವೃತ್ತಿಯನ್ನು ಪಡೆದರು. ಪಟ್ವರ್ಧನ್ ತಮ್ಮ ಸೇವಾವಧಿಯಲ್ಲಿ ಬರಿ ಕನ್ನಡ ಮೇಷ್ಟ್ರಾಗಿರದೆ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಕಾರ್ಯ ನಿರ್ವಹಣಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದವರು. ಉಜಿರೆ ಲಯನ್ಸ್ ಕ್ಲಬ್ಬಿನ ಸದಸ್ಯ, ಕಾರ್ಯದರ್ಶಿ, ಕೋಶಾಧಿಕಾರಿ ಲಯನ್ಸ್ ಯುವಜನ ಸೇವಾಧ್ಯಕ್ಷ ಮತ್ತು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾಗಿಯೂ, ಉಜಿರೆ ಗ್ರಾಮೀಣ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಯಾಗಿ ಸಂಘಟನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಜನಪ್ರಿಯರಾದವರು.

ಮುಂದೆ ಓದಿ


ಎನ್. ಕರುಣಾಕರ ಗೋಗಟೆಸಮಾಜ ಸೇವೆ

ಎನ್. ಕರುಣಾಕರ ಗೋಗಟೆ

ಹುಟ್ಟಿದ ಊರನ್ನು ಯಾರಿಂದಲಾದರೂ ಮರೆಯಲು ಸಾಧ್ಯವೇ? ದೂರದ ಹೊಸಮಠದಲ್ಲಿದ್ದರೂ ಹುಟ್ಟೂರು ಶಿಶಿಲ ಮತ್ತು ಕರ್ಮಭೂಮಿ ಹೊಸಮಠಗಳ ಅಭಿವೃದ್ಧಿಯಲ್ಲಿ ಅವರು ಸಮಾನವಾಗಿ ತನ್ನನ್ನು ತೊಡಗಿಸಿಕೊಂಡವರು. ಸಮುದಾಯ ಸಂಘಟನೆಗೆ ಮನ ಮಾಡಿದ ಗೋಗಟೆಯವರು 1982ರಲ್ಲಿ ಶಿಶಿಲ ಸೀಮಾ ಚಿತ್ಪಾವನ ಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಿರಂತೆ ಚಟುವಟಿಕೆ, ಸೇವಾ ಮನೋಭಾವಗಳಿದ್ದ ಇವರಿಗೆ 1998ರಲ್ಲಿ ಊರ ಶ್ರೀ ಪರಶುರಾಮ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನ ಪ್ರಾಪ್ತವಾಯಿತು. ಊರ ಶುಭ ಸಮಾರಂಭಗಳಿಗೆ ಸಭಾಭವನದ ಕೊರತೆಯನ್ನು ಕಂಡುಕೊಂಡ ಗೋಗಟೆಯವರ ನೇತೃತ್ವದಲ್ಲಿ ದರ್ಭೆತಡ್ಕ ಶ್ರೀ ಪರಶುರಾಮ ದೇವಾಲಯದ ಬಳಿ ಊರವರ ಸಹಕಾರ, ಊರ-ಪರವೂರ ದಾನಿಗಳ ನೆರವು, ಶ್ರಮದಾನಗಳ ಮೂಲಕ ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ 'ಭಾರ್ಗವ ಸಭಾ ಭವನ' ನಿರ್ಮಾಣವಾಯಿತು.ಇದೇ ಸಂದರ್ಭದಲ್ಲಿ ಈ ಸಭಾಭವನದಲ್ಲಿ ರಾಜ್ಯಮಟ್ಟದ ಮೂರನೇಯ ಚಿತ್ಪಾವನ ಸಮ್ಮೇಳನವನ್ನು ಆಯೋಜಿಸಿ ಸಭಾಗೃಹವನ್ನು ಉದ್ಘಾಟಿಸಲಾಯಿತು.

ಮುಂದೆ ಓದಿ


ಎಂ. ಎನ್. ರಮೇಶ್ಉದ್ಯಮ

ಎಂ. ಎನ್. ರಮೇಶ್

ಮಾಹಿತಿ ತಂತ್ರಜ್ಞಾನ (IT) ಮತ್ತು ಅದರ ಪೂರಕ ಕ್ಷೇತ್ರಗಳು ಇನ್ನು ಪರಿಚಿತವಾಗದ ಕಾಲದಲ್ಲಿ ಮೈಸೂರು ವಿಶ್ವ ವಿದ್ಯಾಲಯದಿಂದ ಬಿ.ಎಸ್ಸಿ., ಪದವಿ, ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್ (ಇಂಡಿಯಾ) ದಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ತಾಂತ್ರಿಕ ಶಿಕ್ಷಣವನ್ನು ಪಡೆದು ದೇಶದ ಹೆಮ್ಮೆಯ ಕುದುರೆಮುಖ ಪ್ರಾಜೆಕ್ಟ್ ನಲ್ಲಿ ಕಾರ್ಯನಿರ್ವಹಿಸಿ ಕಾಂಕ್ರಿಟ್ ಮತ್ತು ಉಕ್ಕು ಬಳಕೆಯ ಕಾಮಗಾರಿಯಲ್ಲಿ ವಿಶೇಷ ಒಲವು ಮತ್ತು ಪ್ರಾವೀಣ್ಯತೆಯನ್ನು ಪಡೆದವರು ಎಂ.ಎನ್. ರಮೇಶ್. ಕಾಂಕ್ರಿಟ್ ಬಳಕೆಯ ಕ್ಷಮತೆ, ದೃಢತೆ ಮತ್ತು ಬಾಳಿಕೆಯ ವಿಷಯದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿರುವುದು ಎಂ.ಎನ್. ರಮೇಶ್ ಅವರಿಗೆ ಆ ಕ್ಷೇತ್ರದಲ್ಲಿರುವ ಅನುಭವ, ಅಪಾರ ಜ್ಞಾನಕ್ಕೆ ಸಂದ ಕೊಡುಗೆ.

ಮುಂದೆ ಓದಿ


ಡಿ. ಭಾಸ್ಕರ ಫಾಟಕ್ಸಮಾಜ ಸೇವೆ

ಡಿ. ಭಾಸ್ಕರ ಫಾಟಕ್

ನಿರಂತರ ಸಾಧನೆ, ಪರಿಶ್ರಮಗಳಿಂದ ಬದುಕನ್ನು ಸುಭದ್ರಗೊಳಿಸಿ ಸಂತೃಪ್ತ ಕೌಟುಂಬಿಕ ಜೀವನ, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಪರೂಪದ ವ್ಯಕ್ತಿ ಶ್ರೀ ಡಿ. ಭಾಸ್ಕರ ಫಾಟಕ್. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಒಂದು ಪುಟ್ಟ ಗ್ರಾಮ ದುರ್ಗದಲ್ಲಿ ಜೂನ್ 4, 1937ರಲ್ಲಿ ಅನಂತ ಫಾಟಕ ಮತ್ತು ಗೌರಿ ದಂಪತಿಗಳ ಪುತ್ರನಾಗಿ ಜನಿಸಿದವರು ಭಾಸ್ಕರ ಫಾಟಕರು. ಮಧ್ಯಮ ವರ್ಗದ ಸಾಂಪ್ರದಾಯಿಕ ಕೃಷಿಕ ಕುಟುಂಬ,

ಮುಂದೆ ಓದಿ