ಎನ್.ಕೆ. ಜೋಗಳೇಕರ್ಸೇವಾ ಕ್ಷೇತ್ರ

ಎನ್.ಕೆ. ಜೋಗಳೇಕರ್

ಜ್ಯೋತಿ‍ಷ್ಯಶಾಸ್ತ್ರದಲ್ಲಿ ಬಹುಮುಖ ಸೇವೆಯನ್ನು ಗೈದ ಶ್ರೀ ಎನ್.ಕೆ. ಜೋಗಳೇಕರ್ ಅವರ ಜನನ ಜೂನ್ 10, 1931ರಂದು ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ಭರಡಿ ಗ್ರಾಮದಲ್ಲಿ. ತಂದೆ ಅಧ್ಯಾಪಕ ಮತ್ತು ಜ್ಯೋತಿಷಿ. ತಂದೆ ಕಲ್ಲೋಪಂತ ಜೋಗಳೇಕರ ಮತ್ತು ತಾಯಿ ಉಮಾಬಾಯಿ. ಈ ದಂಪತಿಗಳ ಒಂಭತ್ತು ಮಕ್ಕಳಲ್ಲಿ ಜೋಗಳೇಕರ್ ಐದನೆಯವರು. ಜೋಗಳೇಕರ್ ಬಾಲ್ಯದಲ್ಲಿ ಬಡತನದ ಬೇಗೆಯನ್ನು ಅನುಭವಿಸಿದವರು. ಶಿಕ್ಷಣದ ಸಮಯದಲ್ಲೇ ಮನೆಮನೆಗೆ ದಿನಪತ್ರಿಕೆಗಳನ್ನು ವಿತರಿಸುವ ಕೆಲಸ ಮಾಡಿಕೊಂಡು ಎಸ.ಎಸ್.ಎಲ್.ಸಿ.ಯವರೆಗೆ ಶಿಕ್ಷಣವನ್ನು ಪಡೆದರು. ಆಯುರ್ವೇದದಲ್ಲಿ ನಾಲ್ಕು ವರ್ಷಗಳ ಡಿಪ್ಲೊಮಾ ಕೋರ್ಸನ್ನು ಕಲಿತವರು. 1952ರಿಂದ 1957ರವರೆಗೆ ಪಿ.ಡಬ್ಲ್ಯು.ಡಿ. ಇಲಾಖೆಯಲ್ಲಿ ಸೇವೆಗೈದು ಜ್ಯೋತಿಷ್ಯದ ಬಗೆಗಿನ ತೀವ್ರವಾದ ಆಸಕ್ತಿಯಿಂದ ನೌಕರಿಯನ್ನು ತ್ಯಜಿಸಿದರು. 1961ರಲ್ಲಿ ಜ್ಯೋತಿಷ್ಯಶಾಸ್ತ್ರಕ್ಕೆ ಸಂಬಂಧಿಸಿದ 'ಜ್ಯೋತಿರ್ವಾಣಿ' ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರೂ ಜ್ಯೋತಿಶ್ಯಾಸ್ತ್ರಗಳ ಬಗೆಗೆ ಬರೆಯುವ ಲೇಖಕರ ಕೊರತೆಯಿಂದಾಗಿ ಅವರು ಪತ್ರಿಕೆಯನ್ನು ನಿಲ್ಲಿಸಬೇಕಾಯಿತು. ಜ್ಯೋತಿಶ್ಯಾಸ್ತ್ರಕ್ಕೆ ಸಂಬಂಧಿಸಿದಂತೆ ಜೋಗಳೇಕರ್ ಅವರ ವಿದ್ವತ್ಪೂರ್ಣ ಲೇಖನಗಳು ಕರ್ನಾಟಕದ ಪ್ರಖ್ಯಾತ ದೈನಿಕ, ಸಾಪ್ತಾಹಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಮುಂದೆ ಓದಿ