ಕನ್ನಡದ ಕಟ್ಟಾಳು ವಿನಾಯಕರಾವ್ ಜೋಶಿಸಮಾಜ ಸೇವೆ

Don't just be there, do something, Exist....' ಫ್ರೆಂಚ್ ಅಸ್ಥಿತ್ವವಾದಿ, ಚಿಂತಕ ಸಾರ್ತ್ರೆಯ ಈ ಮಾತು ಕನ್ನಡದ ಕಟ್ಟಾಳು ವಿನಾಯಕರಾವ್ ಜೋಶಿಯವರಿಗೆ ಸಲ್ಲಬೇಕು.ವಿನಾಯಕರಾವ್ ಜೋಶಿಯವರ ಪೂರ್ವಜರು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲಾ ಗುಹಾಗರ್ ತಾಲೂಕಿನ ಪಾಲಶೇತ್ ಎಂಬಲ್ಲಿಯವರು. ಇದೇ ತಾಲ್ಲೂಕಿನ ಕೊಳಿಸರೆಯ ಲಕ್ಷ್ಮೀಕೇಶವ ಇವರ ಕುಲದೈವ. ಮೂಲದಲ್ಲಿ ಇವರದು ವೈದಿಕ ಮನೆತನ. ಆ ವೃತ್ತಿ ಸರಿಯಾಗಿ ನಡೆಯದೇ ಇದ್ದಾಗ ಇವರ ತಂದೆ ಬಾಬಜೀ ಜೋಶಿ ಒಂದು ರೂಪಾಯಿನ್ನು ಮುಷ್ಟಿಯಲ್ಲಿಟ್ಟುಕೊಂಡು ಕರ್ನಾಟಕದ ಧುಂಡಶಿಗೆ ಬಂದವರು. ಭತ್ತ ಮತ್ತು ಭತ್ತದ ಹುಲ್ಲಿನ ವ್ಯಾಪಾರವನ್ನು ಒಂದು ರೂಪಾಯಿ ಬಂಡವಾಳದಲ್ಲಿ ಪ್ರಾರಂಭಿಸಿ ವ್ಯವಹಾರದಲ್ಲಿ ನಿಷ್ಟೆ ಮತ್ತು ಪ್ರಾಮಾಣಿಕತೆಗಳನ್ನು ಮೆರೆದು ದುಂಢಶಿಯಲ್ಲೇ ಜಮೀನು ಖರೀದಿಸಿದರು. ಚಿಕ್ಕದೊಂದು ಮನೆಯನ್ನು ಕಟ್ಟಿದರು. ಈ ಧುಂಡಶಿಯಲ್ಲೇ 1961ರಲ್ಲಿ ವಿನಾಯಕರಾವ್ ಜೋಶಿಯವರ ಜನನವಾಯಿತು.
ತಲಾರೆ ಗಣಪತಿ ಭಟ್ಸಮಾಜ ಸೇವೆ

ಲೌಕಿಕ ಬದುಕಿಗೆ ಸರಕಾರಿ ವೃತ್ತಿ, ಜತೆಯಲ್ಲಿ ವೇದಾಧ್ಯಯನ, ತರ್ಕಶಾಸ್ತ್ರ, ನ್ಯಾಯಶಾಸ್ತ್ರಗಳಲ್ಲಿ ಆಳವಾದ ಅಧ್ಯಯನ, ಜ್ಯೋತಿಷ್ಯಶಾಸ್ತ್ರದಲ್ಲಿ 'ಇದಮಿತ್ಥಂ' ಎಂದು ಹೇಳಬಲ್ಲ ಪ್ರಗಲ್ಭ ಪಾಂಡಿತ್ಯ, ಸತ್ಯವನ್ನು ಪ್ರತಿಪಾದಿಸುವ ನಿರ್ಭೀತ ನಡೆ, ಪರೋಪಕಾರ ಪ್ರವೃತ್ತಿ, ಜೀವನ ಪ್ರೀತಿ ಇವುಗಳೆಲ್ಲ ಸಮ್ಮಿಳಿತಗೊಂಡ ಆದರ್ಶ ವ್ಯಕ್ತಿತ್ವ ದಿ. ತಲಾರೆ ಗಣಪತಿ ಭಟ್ಟರದು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣದ ತಲಾರೆಎಂಬಲ್ಲಿ ಇರುವ ಗೋವಿಂಡೆ ಮನೆತನದ ಶಂಕರ ಭಟ್ಟ ಮತ್ತು ಗೌರಿ ದಂಪತಿಗಳ ಎಂಟು ಮಕ್ಕಳಲ್ಲಿ ಐದನೆಯವರಾಗಿ ಗಣಪತಿ ಭಟ್ಟರು ಜನವರಿ2, 1942ರಲ್ಲಿ ಜನಿಸಿದರು.
ಸಂತ ಗುರುದೇವ ರಾನಡೆಸಮಾಜ ಸೇವೆ

ಗುರುದೇವರು ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಹಾ ಮೇಧಾವಿ ವಿದ್ಯಾರ್ಥಿಯಾಗಿ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಅನೇಕ ವಿದ್ಯಾರ್ಥಿ ವೇತನಗಳನ್ನು ಮತ್ತು ಚಿನ್ನದ ಪದಕಗಳನ್ನು ಪಡೆದವರು.1914ರಲ್ಲಿ ತತ್ವಶಾಸ್ತ್ರದಲ್ಲಿ ಎಂ.ಎ.ಪದವಿಯನ್ನು ಕುಲಪತಿಗಳ ಚಿನ್ನದ ಪದಕದೊಂದಿಗೆ ಪಡೆದರು. ಮುಂದೆ ಪಾಶ್ಚಾತ್ಯ ಮತ್ತು ಪೌರ್ವಾತ್ಯ ತತ್ವಶಾಸ್ತ್ರಗಳ ಬಗೆಗೆ ವಿಶೇಷ ಅಧ್ಯಯನವನ್ನು ನಡೆಸಿ ಇಸವಿ 1914 ಮತ್ತು 1924 ರ ಅವಧಿಯಲ್ಲಿ ಪುಣೆಯ ಫರ್ಗುಸನ್ ಕಾಲೇಜು ಮತ್ತು ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜುಗಳಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಗುರುದೇವರಾನಡೆಯವರ ಅನಾರೋಗ್ಯ, ಸಾಂಸಾರಿಕ ಕಷ್ಟ ಕೋಟಲೆಗಳು ಅವರ ಆಧ್ಯಾತ್ಮ ಸಾಧನೆಯ ದಾರಿಯಲ್ಲಿ ಅವರ ಮನೋಸ್ಥೈರ್ಯವನ್ನು ಅಡಿಗಡಿಗೆ ಪರೀಕ್ಷಿಸುತ್ತಿದ್ದರೂ ಸದ್ಗುರುವಿನ ಪರಮ ಕೃಪೆಯಿಂದ ಅವರು ಇವೆಲ್ಲವನ್ನು ಲೀಲಾಜಾಲವಾಗಿ ಎದುರಿಸಿದರು.