ರಂಗನಾಥ ಸುಬ್ರಾಯ ಮರಾಠೆ ಉದ್ಯಮ

ದುಂಡು ಮುಖ, ಗುಂಡುಮೈ. ಬೋಳು ತಲೆ, ಖಾದಿಟೋಪಿ. ಸರಳ ಸಾದಾ ಉಡುಪು, ಸದಾ ಹಸನ್ಮುಖಿ. ಮಾತಿಗೆ ತೊಡಗಿದರೆ ಇತಿಹಾಸ ದರ್ಶನ. ಸಂಬಂಧಗಳ ಬೆಸುಗೆಯತ್ತ ಇಣುಕು ನೋಟ, ಆತ್ಮೀಯಭಾವ. ನೇರ ನಡೆ-ನುಡಿ, ನಿಸ್ಪೃಹ ಪ್ರಾಮಾಣಿಕ ವ್ಯಕ್ತಿತ್ವ. ಇದು ನಮ್ಮ ಬೆಂಗಳೂರು ಚಿತ್ಪಾವನ ಸಮಾಜದ ಸ್ಥಾಪಕಾಧ್ಯಕ್ಷ, ಸಂಘಟನೆಯ ರೂವಾರಿ ದಿ|| ರಂಗನಾಥ ಸುಬ್ರಾಯ ಮರಾಠೆ ಅವರ ವ್ಯಕ್ತಿತ್ವ ದರ್ಶನ. ರಂಗನಾಥ ಮರಾಠೆಯವರ ಜನನ ಮೇ 3,1917ರಂದು. ಬಾಲ್ಯದಲ್ಲೇ ತಂದೆ ಸುಬ್ರಾಯ ಮರಾಠೆಯವರನ್ನು ಕಳೆದುಕೊಂಡ ಮೇಲೆ ತಾಯಿ-ಮಕ್ಕಳಿಬ್ಬರದು ದುಸ್ತರ ಬದುಕು. ಪರಿಚಿತರ, ಬಂಧುಗಳ ಮನೆಯಲ್ಲಿ ಅಡುಗೆ ವೃತ್ತಿ. ಮಕ್ಕಳನ್ನು ಸಾಕಿ ಸಲಹಿ ಯೋಗ್ಯರನ್ನಾಗಿ ರೂಪಿಸುವ ಧ್ಯೇಯವೊಂದೇ ಆ ಮಹಾಮಾತೆಗೆ.
ಸಮಾಜ ಪುಸ್ತಕಾಲಯದ ಭಾಲಚಂದ್ರ ಘಾಣೇಕರಉದ್ಯಮ

ಬೆಟಗೇರಿ ಕೃಷ್ಣಶರ್ಮರವರು ಘಾಣೇಕರರನ್ನು ಕುರಿತು ಈ ರೀತಿ ಬರೆಯುತ್ತಾರೆ ' 'ಭವತಿ ಭಿಕ್ಷಾಂದೇಹಿ'ಯ ಈ ಬಾಲಕ ಭವಿಷ್ಯದಲ್ಲಿ ಇಂತಹದೊಂದು ಲೌಕಿಕ ಸ್ಥಾನದಲ್ಲಿ ನಿಲ್ಲಬಲ್ಲನೆಂಬ ಯಾವ ವಿಶೇಷ ಲಕ್ಷಣಗಳನ್ನು ನಾನು ಅವನ ವಿದ್ಯಾರ್ಥಿ ದೆಸೆಯಲ್ಲಿ ಕಂಡಿರಲಿಲ್ಲ. 'ಪುರುಷಸ್ಯ ಭಾಗ್ಯಂ ದೇವೋ ನ ಜಾನಾತಿ''! ವಿಷಮ ಆರ್ಥಿಕ ಪರಿಸ್ಥಿತಿಯಿಂದಾಗಿ ಹೈಸ್ಕೂಲು ಶಿಕ್ಷಣವನ್ನು ಮುಗಿಸಲಾಗದ ಘಾಣೇಕರರು ಗಳಿಸಿದ ಜೀವನಾನುಭವವೇ ಅವರನ್ನು ಒಬ್ಬ ಸಮರ್ಥ ಉದ್ಯಮಿಯಾಗಿ ರೂಪಿಸಿತು. ನಾಮಫಲಕಗಳನ್ನು ಬರೆಯುವುದು, ಬೇಕರಿ ಕೆಲಸ, ಫೋಟೊಗಳಿಗೆ ಫ್ರೇಮ್ ಹಾಕುವುದು, ಮುದ್ರಣ ಕಾಗದಗಳ ವ್ಯಾಪಾರ, ಸ್ವದೇಶಿ ವಸ್ತುಗಳ ಮಾರಾಟ, ಮನೆಯಲ್ಲೇ ಚಟ್ನಿಪುಡಿ, ಮಸಾಲೆ, ದಂತಮಂಜನಗಳನ್ನು ತಯಾರಿಸಿ ಮಾರುವುದು ಘಾಣೇಕರರು ಕೈಗೊಳ್ಳ್ದ ವೃತ್ತಿಯಿಲ್ಲ. ಇವೆಲ್ಲವುಗಳ ಮಧ್ಯೆ ಸ್ವಾತಂತ್ರ್ಯ ಚಳುವಳಿಯ ಹುಚ್ಚು, ತಿಂಗಳುಗಟ್ಟಲೆ ಕಾಲ ಸೆರೆಮನೆ ವಾಸ.