ಬಿ. ರಾಮಚಂದ್ರ ಭಟ್ ತಾಮನ್ಕರ್ಸಾಹಿತ್ಯ

ಬಹುಶಃ ಹಿಂದಿನ ತಲೆಮಾರಿನ ಕನ್ನಡಿಗರಿಗೆ ಈ ಶಿಶು ಗೀತೆಯನ್ನು ಓದಿದಾಗ ಇದರ ಕರ್ತೃ ಯಾರೆಂಬುದು ನೆನಪಾಗದೆ ಇರದು. ಇದು ಬೆಳ್ತಂಗಡಿ ತಾಲೂಕಿನ ಶಿಶುಗೀತೆಗಳ ಪ್ರಥಮ ಕವಿ ಬಿ. ರಾಮಚಂದ್ರ ಭಟ್ಟರ ಒಂದು ಕವಿತೆ. ಸ್ವರಮಾಲೆಯಲ್ಲಿ ರಚಿತವಾದ ಚೌತಿ ಹಬ್ಬದ ಸಂಭ್ರಮವನ್ನು ವಿವರಿಸುವ ಈ ಗೀತೆಯನ್ನು ಯಾರು ತಾನೆ ಮರೆಯಲು ಸಾಧ್ಯ? 'ತಮ್ಮನ ಕವಿತೆಗಳು' (1952), 'ಶಿಶು ವಿಹಾರ' (1953), 'ಪುಟ್ಟನ ಪಿಟಿಲು'(1954),''ಪೀಪಿ',ವಿಕಾಸ ವಾಣಿ ಮತ್ತು ಇತರ ಹಾಡುಗಳು'(1955), ಗಾನ ಗೌರಿ' (1960), 'ಮಕ್ಕಳ ಗೀತ ರಾಮಾಯಣ'(1977), 'ರಾಮಣ್ಣನ ರಗಳೆಗಳು' - ಅಪ್ರಕಟಿತ) ಮುಂತಾದ ಶಿಶು ಗೀತೆಗಳ ಜೊತೆಗೆ ಪ್ರೌಢರಿಗೂ ಕೂಡ ನೀತಿಯನ್ನು ಸಾರುವ ಕವಿತೆಗಳ ಕರ್ತೃ ಬಿ. ರಾಮಚಂದ್ರ ಭಟ್ಟ (ಬತ್ರಬೈಲ್ ರಾಮಚಂದ್ರ ಭಟ್ಟ ತಾಮ್ಹನ್ಕರ್)
ಮಹದೇವ ಭಟ್ ಡೋಂಗ್ರೆ, ಮರಸಣಿಗೆಸಾಹಿತ್ಯ

ಮಹದೇವ ಡೋಂಗ್ರೆಯವರು 'ಮಂಜುಗೋಷಾ ಪರಿಣಯ' ಎಂಬ ಯಕ್ಷಗಾನ ಪ್ರಸಂಗಕರ್ತರೂ ಹೌದು. ರಮಾಧವ ಅಥವಾ ಉರುಳಲ್ಲಿ ಎಂಬ ಅಪ್ರಕಟಿತ ಕಾದಂಬರಿಯ ಕರ್ತೃವೂ ಹೌದು. ಛಂಧೋಬದ್ಧವಾಗಿ ಕಾವ್ಯ ನಿರ್ಮಿತಿಯಯನ್ನು ಬಲ್ಲವರಾಗಿದ್ದ ಇವರು 'ಭಕ್ತಿ ಶತಕ' ಮತ್ತು 'ಪ್ರಕೃತಿ' ಎಂಬ ಕಾವ್ಯ ಸಂಗ್ರಹದ ಕವಿಯೂ ಹೌದು. ಇವರು ಯಕ್ಷಗಾನದಲ್ಲಿ ಭಾಗವತರಾಗಿಯೂ ಸೇವೆ ಸಲ್ಲಿಸಿದವರು. ಇವರ ಛಂದೋಬದ್ಧ ಭಕ್ತಿರಚನೆಯಲ್ಲಿನ ಗಣೇಶ ಸ್ತುತಿಯೊಂದು ಹೀಗಿದೆ : ಏಕದಂತ ವಿಶಾಲ ವದನ ತ್ರಿ ಲೋಕ ವಂದಿತ ಪಾರ್ವತೀಸುತ ಪಾಕಶಾಸನ ಪೂಜಿತಾಂಘ್ರಿ ಸರೋಜಕೊಂದಿಪೆನೊ ಶೋಕವರ್ಜಿತ ಭಕ್ತರಿಂಗಿತ ಭೇಕವೈರಿ ನಿಬಂಧಿತೋದರ ಏಕಮಾಮನಸದಲ್ಲಿ ನಂಬಿದವರನ್ನು ಪಾಲಿಸುಗೇ
ಕೆ. ಎನ್. ಭಟ್ ಶಿರಾಡಿಪಾಲ್ ಸಾಹಿತ್ಯ

1947ರಲ್ಲಿ ತಮ್ಮ ಸ್ವಗ್ರಾಮಕ್ಕೆ ತೆರಳಿ ತಮ್ಮ ಅಲೆದಾಟವನ್ನು ಕೊನೆಗೊಳಿಸಿ ಶಿರಾಡಿಪಾಲರು ಕೃಷಿಕ್ಷೇತ್ರವೊಂದರಲ್ಲಿ ನೆಲೆ ನಿಂತರು. ಅನಸೂಯಾ ಎಂಬ ಕನ್ಯೆಯನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿ ಅಡಿಕೆಸೋಗೆಗಳ ಮಾಡಿನ ಪುಟ್ಟ ಮನೆಯಲ್ಲಿ ಶಿರಾಡಿಪಾಲರು ದಾಂಪತ್ಯ ಜೀವನವನ್ನು ಪ್ರಾರಂಭಿಸಿದರು. ಆಗ ಅವರ ಊರೆಂದರೆ ಆಸ್ಪತ್ರೆ, ಶಾಲೆ, ಅಂಚೆ ಕಚೇರಿ, ವಿದ್ಯುತ್ಗಳನ್ನು ಕಾಣದ ಕುಗ್ರಾಮ. ಎಂಟು ಮಕ್ಕಳ ತುಂಬು ಸಂಸಾರ ಶಿರಾಡಿಪಾಲರದು. ಕೃಷಿಕ್ಷೇತ್ರದ ದುಡಿಮೆಯ ಜತೆಯಲ್ಲೇ ಸಾಹಿತ್ಯ ಕೃಷಿ ನಡೆಸಿದರು. ನಾಗರಿಕ ಸೌಲಭ್ಯಗಳನ್ನೇ ಕಾಣದ ಕಡಿರುದ್ಯಾವರ ಎಂಬ ಹಳ್ಳಿಯಲ್ಲಿ 'ವಿಚಾರ ಸಾಹಿತ್ಯಮಾಲೆ' ಎಂಬ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿದರು. ಕವಿಯಾದವನಿಗೆ ಬರಿ ಎರಡು ಕಣ್ಣಲ್ಲ. ಲೋಕಜ್ಞಾನವನ್ನು ಅರಿಯುವ ಮೂರನೇ ಕಣ್ಣೊಂದು ಆತನಿಗಿರಬೇಕು. ಶಿರಾಡಿಪಾಲರು 'ತ್ರಿನಯನ' ಎಂಬ ಕಾವ್ಯನಾಮದೊಂದಿಗೆ 'ಮಲೆನಾಡು', 'ರಾಷ್ಟ್ರಮತ', 'ಸಂಚಾರಿ', 'ಜನಪ್ರೇಮಿ', 'ನವಭಾರತ', 'ನವಯುಗ', 'ಸಂಧ್ಯಾದೀಪ', 'ಕರ್ಮವೀರ', 'ಪ್ರಭಾತ', 'ವಿಕ್ರಮ', 'ಯುಗಪುರುಷ', 'ಸುಧಾ', 'ತರಂಗ', 'ಉದಯವಾಣಿ', 'ಮಂಜುವಾಣಿ' ಮೊದಲಾದ ಪತ್ರಿಕೆಗಳಿಗೆ ತಮ್ಮ ಕತೆ, ಕವನ, ವೈಚಾರಿಕ ಲೇಖನಗಳನ್ನು ಬರೆದರು.
ಸರಸ್ವತಿಬಾಯಿ ರಾಜವಾಡೆಸಾಹಿತ್ಯ

ಕನ್ನಡ ಸಾರಸ್ವತಲೋಕ ಕಂಡ ಆಧುನಿಕ ಚಿಂತನೆಯ ಈ ಬರಹಗಾರ್ತಿ ತನ್ನ ವಿವಾಹಾನಂತರ ಚಿತ್ಪಾವನಳು ಎಂಬುದು ನಾವು ಹೆಮ್ಮೆಪಡುವ ವಿಚಾರ.'ಗಿರಿಬಾಲೆ' ಕಾವ್ಯನಾಮದ ಸರಸ್ವತಿಬಾಯಿ ರಾಜವಾಡೆ ಜನಿಸಿದ್ದು ಅಕ್ಟೋಬರ್ 3, 1913.ತಾಯಿಯ ಹೊಟ್ಟೆಯಲ್ಲಿರುವಾಗಲೇ ಸಾಂಸಾರಿಕ ಕಾರಣಗಳಿಗಾಗಿ ಮನೆಬಿಟ್ಟ ತಂದೆ ನಾರಾಯಣರಾವ್ ಮತ್ತೆ ಮನೆಗೆ ಬಂದಿದ್ದು ಹೆಣವಾಗಿ. ಹೀಗಾಗಿ ತಾಯಿ ಕಮಲಾಬಾಯಿಗೆ ಮಗಳೆಂದರೆ ಪರಮ ದ್ವೇಷ. ಐದು ವರ್ಷದ ಮಗು ಹೊಟ್ಟೆಪಾಡಿಗಾಗಿ ಹೂ ಮಾರಿತು, ಅವರಿವರ ಮನೆಯ ಮುಸುರೆ ತೊಳೆಯಿತು. ರೂಪವಿದ್ದುದರಿಂದ ಕೆಲಕಾಲ ರಂಗಭೂಮಿ ಮತ್ತು ಮೂಕಿ ಸಿನೆಮಾಗಳಲ್ಲಿ ಬಾಲನಟಿಯಾಗಿ ದುಡಿಯಿತು. ಈ ಎಲ್ಲವೂ ಹಾಳು ಹೊಟ್ಟೆಪಾಡಿಗಾಗಿ. ವರುಷ ಹದಿನೈದಕ್ಕೆ 51ರ ವಿಧುರ ಅಂಬಿಕಾಪತಿ ರಾಯಶಾಸ್ತ್ರೀ ರಾಜವಾಡೆಯೊಂದಿಗೆ ಮದುವೆ. ರಾಜವಾಡೆ ಆಗರ್ಭ ಶ್ರೀಮಂತ. ಈ ಎಳೆಯ ಹೆಣ್ಣನ್ನು ಪಡೆಯುವುದಕ್ಕಾಗಿ ಆ ಕಾಲದಲ್ಲಿ ಆತ ಮದುವೆ ದಲ್ಲಾಳಿಗಳಿಗೆ ಕೊಟ್ಟದ್ದು ಹತ್ತುಸಾವಿರ ರೂಪಾಯಿಗಳು!