ಬಿ. ರಾಮಚಂದ್ರ ಭಟ್ ತಾಮನ್ಕರ್ಸಾಹಿತ್ಯ

ಬಿ. ರಾಮಚಂದ್ರ ಭಟ್ ತಾಮನ್ಕರ್

ಬಹುಶಃ ಹಿಂದಿನ ತಲೆಮಾರಿನ ಕನ್ನಡಿಗರಿಗೆ ಈ ಶಿಶು ಗೀತೆಯನ್ನು ಓದಿದಾಗ ಇದರ ಕರ್ತೃ ಯಾರೆಂಬುದು ನೆನಪಾಗದೆ ಇರದು. ಇದು ಬೆಳ್ತಂಗಡಿ ತಾಲೂಕಿನ ಶಿಶುಗೀತೆಗಳ ಪ್ರಥಮ ಕವಿ ಬಿ. ರಾಮಚಂದ್ರ ಭಟ್ಟರ ಒಂದು ಕವಿತೆ. ಸ್ವರಮಾಲೆಯಲ್ಲಿ ರಚಿತವಾದ ಚೌತಿ ಹಬ್ಬದ ಸಂಭ್ರಮವನ್ನು ವಿವರಿಸುವ ಈ ಗೀತೆಯನ್ನು ಯಾರು ತಾನೆ ಮರೆಯಲು ಸಾಧ್ಯ? 'ತಮ್ಮನ ಕವಿತೆಗಳು' (1952), 'ಶಿಶು ವಿಹಾರ' (1953), 'ಪುಟ್ಟನ ಪಿಟಿಲು'(1954),''ಪೀಪಿ',ವಿಕಾಸ ವಾಣಿ ಮತ್ತು ಇತರ ಹಾಡುಗಳು'(1955), ಗಾನ ಗೌರಿ' (1960), 'ಮಕ್ಕಳ ಗೀತ ರಾಮಾಯಣ'(1977), 'ರಾಮಣ್ಣನ ರಗಳೆಗಳು' - ಅಪ್ರಕಟಿತ) ಮುಂತಾದ ಶಿಶು ಗೀತೆಗಳ ಜೊತೆಗೆ ಪ್ರೌಢರಿಗೂ ಕೂಡ ನೀತಿಯನ್ನು ಸಾರುವ ಕವಿತೆಗಳ ಕರ್ತೃ ಬಿ. ರಾಮಚಂದ್ರ ಭಟ್ಟ (ಬತ್ರಬೈಲ್ ರಾಮಚಂದ್ರ ಭಟ್ಟ ತಾಮ್ಹನ್ಕರ್)

ಮುಂದೆ ಓದಿ


ಮಹದೇವ ಭಟ್ ಡೋಂಗ್ರೆ, ಮರಸಣಿಗೆಸಾಹಿತ್ಯ

ಮಹದೇವ ಭಟ್ ಡೋಂಗ್ರೆ, ಮರಸಣಿಗೆ

ಮಹದೇವ ಡೋಂಗ್ರೆಯವರು 'ಮಂಜುಗೋಷಾ ಪರಿಣಯ' ಎಂಬ ಯಕ್ಷಗಾನ ಪ್ರಸಂಗಕರ್ತರೂ ಹೌದು. ರಮಾಧವ ಅಥವಾ ಉರುಳಲ್ಲಿ ಎಂಬ ಅಪ್ರಕಟಿತ ಕಾದಂಬರಿಯ ಕರ್ತೃವೂ ಹೌದು. ಛಂಧೋಬದ್ಧವಾಗಿ ಕಾವ್ಯ ನಿರ್ಮಿತಿಯಯನ್ನು ಬಲ್ಲವರಾಗಿದ್ದ ಇವರು 'ಭಕ್ತಿ ಶತಕ' ಮತ್ತು 'ಪ್ರಕೃತಿ' ಎಂಬ ಕಾವ್ಯ ಸಂಗ್ರಹದ ಕವಿಯೂ ಹೌದು. ಇವರು ಯಕ್ಷಗಾನದಲ್ಲಿ ಭಾಗವತರಾಗಿಯೂ ಸೇವೆ ಸಲ್ಲಿಸಿದವರು. ಇವರ ಛಂದೋಬದ್ಧ ಭಕ್ತಿರಚನೆಯಲ್ಲಿನ ಗಣೇಶ ಸ್ತುತಿಯೊಂದು ಹೀಗಿದೆ : ಏಕದಂತ ವಿಶಾಲ ವದನ ತ್ರಿ ಲೋಕ ವಂದಿತ ಪಾರ್ವತೀಸುತ ಪಾಕಶಾಸನ ಪೂಜಿತಾಂಘ್ರಿ ಸರೋಜಕೊಂದಿಪೆನೊ ಶೋಕವರ್ಜಿತ ಭಕ್ತರಿಂಗಿತ ಭೇಕವೈರಿ ನಿಬಂಧಿತೋದರ ಏಕಮಾಮನಸದಲ್ಲಿ ನಂಬಿದವರನ್ನು ಪಾಲಿಸುಗೇ

ಮುಂದೆ ಓದಿ


ಮುದ್ರಾ ವಿಜ್ಞಾನಿ ಸುಮನ್ ಚಿಪ್ಲೂಣ್ಕರ್ವಿಶಿಷ್ಠ ಸಾಧನೆ

  ಮುದ್ರಾ ವಿಜ್ಞಾನಿ ಸುಮನ್ ಚಿಪ್ಲೂಣ್ಕರ್

ಸುಮನ್ ಕೇಶವ ಚಿಪಳೂಣ್ಕರ್. ಕಾರ್ಕಳ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು. ಕಾರ್ಕಳದಲ್ಲಿ ವಕೀಲ ದುರ್ಗ ವೆಂಕಟೇಶ ಭಟ್ಟರೆಂದರೆ ಬಡವರ ವಕೀಲರೆಂದೇ ಚಿರಪರಿಚಿತರು. ಮೃದು ಭಾಷಿ, ಸ್ನೇಹಮಯಿ. ಖಾದಿಯ ಬಿಳಿಯ ಪಂಚೆ, ಮೇಲೊಂದು ಬಿಳಿಯ ಜುಬ್ಬಾ, ವಕೀಲರು ಧರಿಸುವ ಕರಿಕೋಟು. ಹೊರಗೆ ಹೊರಟರೆಂದರೆ ಗೌರವದಿಂದ ವಂದಿಸುವ ಮಂದಿ. ಇವರ ಪತ್ನಿ ಪದ್ಮಾವತಿ ಸಂಗೀತಜ್ಞೆ, ದೈವ ಭಕ್ತೆ, ಆತಿಥ್ಯಕ್ಕೆ ಇನ್ನೊಂದು ಹೆಸರು. ಕನ್ನಡ, ಮರಾಠಿ, ಹಿಂದಿ ಮತ್ತು ಸಂಸ್ಕೃತ ಹೀಗೆ ನಾಲ್ಕು ಭಾಷೆಗಳಲ್ಲಿ ಬರೆಯಬಲ್ಲ ಕವಯಿತ್ರಿ ಹರಿಕಥೆಯನ್ನು ಮಾಡುತ್ತಿದ್ದರು. ಇಂತಹ ಸುಸಂಸ್ಕೃತ ದಂಪತಿಗಳ ಮೂರನೆಯ ಮಗಳಾಗಿ ಸೆಪ್ಟೆಂಬರ್ 6, 1940ರಲ್ಲಿ ಜನಿಸಿದವರು ಸರೋಜಾ (ತವರು ಮನೆಯ ಹೆಸರು)ಯಾನೆ ಸುಮನ್ ಚಿಪ್ಲೂಣ್ಕರ್.

ಮುಂದೆ ಓದಿ


ಖರೆ ಗಣಪತಿ ಶಾಸ್ತ್ರಿಗಳುಧಾರ್ಮಿಕ ಕ್ಷೇತ್ರ

ಖರೆ ಗಣಪತಿ ಶಾಸ್ತ್ರಿಗಳು

ಖರೆ ಗಣಪತಿ ಶಾಸ್ತ್ರಿಗಳು ಕರ್ನಾಟಕದ ವೈದಿಕ ಪರಂಪರೆಯ ಧ್ರುವತಾರೆ. 1901, ಇಪ್ಪತ್ತನೆಯ ಶತಮಾನದ ಮೊದಲ ದಿನ. ತಂದೆ ವೈದಿಕ ವಾಙ್ಮಯ ವಿಶಾರದ ಅನಂತ ಭಟ್ಟ ಖರೆ, ತಾಯಿ ಗೃಹಿಣಿ ಗೌರಿ. ಬಾಲಕನ ಭವ್ಯ ಭವಿತವ್ಯಕ್ಕೋ ಎಂಬಂತೆ ಖರೆ ದಂಪತಿಗಳು ಕಾರಣಾಂತರದಿಂದ ಶ್ರೀ ಗೋಕರ್ಣ ಕ್ಷೇತ್ರಕ್ಕೆ ವಲಸೆ ಹೋಗಬೇಕಾಯಿತು. ಬ್ರಹ್ಮೋಪದೇಶದ ಬಳಿಕ ಬಾಲಕ ಗಣಪತಿ ಉದ್ದಾಮ ಪಂಡಿತ ವೇ|ಮೂ| ಪಾಂಡುರಂಗ ಭಟ್ಟ ದಾತೆಯವರ ಬಳಿ ಶಿಷ್ಯತ್ವ ಸ್ವೀಕರಿಸಿದರು. ಸ್ತ್ರೀಯರಿಗೆ ವೇದಾಧ್ಯಯನ ಸಲ್ಲದು ಎಂಬ ಕಾಲದಲ್ಲೇ ತಮ್ಮ ಪುತ್ರಿಯರಿಗೆ ವೇದಾಧ್ಯಯನ ಮಾಡಿಸಿದ ಪ್ರಗತಿಪರ ಚಿಂಕರು ಈ ದಾತೆಯವರು. ಇಂತಹ ಗುರುವಿನ ಗರಡಿಯಲ್ಲಿ ಪಳಗಿದ ಈ ವಾಮನ ಮೂರ್ತಿಯ ಖ್ಯಾತಿ ಮುಂದೆ ಅಖಂಡ ಭಾರತವನ್ನು ವ್ಯಾಪಿಸಿತು.

ಮುಂದೆ ಓದಿ


ಕನ್ನಡದ ಕಟ್ಟಾಳು ವಿನಾಯಕರಾವ್ ಜೋಶಿಸಮಾಜ ಸೇವೆ

 ಕನ್ನಡದ ಕಟ್ಟಾಳು ವಿನಾಯಕರಾವ್ ಜೋಶಿ

Don't just be there, do something, Exist....' ಫ್ರೆಂಚ್ ಅಸ್ಥಿತ್ವವಾದಿ, ಚಿಂತಕ ಸಾರ್ತ್ರೆಯ ಈ ಮಾತು ಕನ್ನಡದ ಕಟ್ಟಾಳು ವಿನಾಯಕರಾವ್ ಜೋಶಿಯವರಿಗೆ ಸಲ್ಲಬೇಕು.ವಿನಾಯಕರಾವ್ ಜೋಶಿಯವರ ಪೂರ್ವಜರು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲಾ ಗುಹಾಗರ್ ತಾಲೂಕಿನ ಪಾಲಶೇತ್ ಎಂಬಲ್ಲಿಯವರು. ಇದೇ ತಾಲ್ಲೂಕಿನ ಕೊಳಿಸರೆಯ ಲಕ್ಷ್ಮೀಕೇಶವ ಇವರ ಕುಲದೈವ. ಮೂಲದಲ್ಲಿ ಇವರದು ವೈದಿಕ ಮನೆತನ. ಆ ವೃತ್ತಿ ಸರಿಯಾಗಿ ನಡೆಯದೇ ಇದ್ದಾಗ ಇವರ ತಂದೆ ಬಾಬಜೀ ಜೋಶಿ ಒಂದು ರೂಪಾಯಿನ್ನು ಮುಷ್ಟಿಯಲ್ಲಿಟ್ಟುಕೊಂಡು ಕರ್ನಾಟಕದ ಧುಂಡಶಿಗೆ ಬಂದವರು. ಭತ್ತ ಮತ್ತು ಭತ್ತದ ಹುಲ್ಲಿನ ವ್ಯಾಪಾರವನ್ನು ಒಂದು ರೂಪಾಯಿ ಬಂಡವಾಳದಲ್ಲಿ ಪ್ರಾರಂಭಿಸಿ ವ್ಯವಹಾರದಲ್ಲಿ ನಿಷ್ಟೆ ಮತ್ತು ಪ್ರಾಮಾಣಿಕತೆಗಳನ್ನು ಮೆರೆದು ದುಂಢಶಿಯಲ್ಲೇ ಜಮೀನು ಖರೀದಿಸಿದರು. ಚಿಕ್ಕದೊಂದು ಮನೆಯನ್ನು ಕಟ್ಟಿದರು. ಈ ಧುಂಡಶಿಯಲ್ಲೇ 1961ರಲ್ಲಿ ವಿನಾಯಕರಾವ್ ಜೋಶಿಯವರ ಜನನವಾಯಿತು.

ಮುಂದೆ ಓದಿ