ಚಿತ್ಪಾವನಿ ಭಾಷೆ

'ಬನ್ನಿ ಚಿತ್ಪಾವನಿ ಕಲಿಯೋಣ'

ಚಿತ್ಪಾವನಿ ನಮ್ಮ ಭಾಷೆ. ನಮ್ಮ ಹಿರಿಯರಾಡುತ್ತಿದ್ದ ಭಾಷೆ. ಕರ್ನಾಟಕ್ಕೆ ಚಿತ್ಪಾವನರ ವಲಸೆಯ ಅಂದಾಜು ನಾಲ್ಕುನೂರು ವರ್ಷಗಳ ನಂತರವೂ ಲಿಪಿಯಿಲ್ಲದ ಈ ಭಾಷೆ ಅಸ್ಥಿತ್ವದಲ್ಲಿದೆ ಅಂದರೆ ಈ ಭಾಷೆಯ ತಾಕತ್ತು ಅಂತಹದು ಮತ್ತು ಈ ಭಾಷೆಯನ್ನಾಡುವ ಚಿತ್ಪಾವನರ ತಮ್ಮ ಭಾಷೆಯ ಮೇಲಿನ ಪ್ರೀತಿ ಅಂತಹದು. ನಗರಗಳೆಡೆ ಚಿತ್ಪಾವನರ ವಲಸೆ, ಶಿಕ್ಷಣದಲ್ಲಿ ಆಂಗ್ಲ ಭಾಷೆಯ ಬಳಕೆ, ವ್ಯಾವಹಾರಿಕವಾಗಿ ಕನ್ನಡದ ಬಳಕೆ ಮೊದಲಾದ ವಿವಿಧ ಕಾರಣಗಳಿಗಾಗಿ ಈ ಭಾಷೆ ಅತಿ ಶೀಘ್ರವಾಗಿ ನಶಿಸಿಹೋಗುತ್ತಿದೆ. ನಮ್ಮ ಮನೆಗಳ ಮಟ್ಟಿಗಾದರೂ ಈ ಭಾಷೆಯನ್ನು ಉಳಿಸಿಕೊಳ್ಳುವ ಯತ್ನದಲ್ಲಿ 'ಬನ್ನಿ ಚಿತ್ಪಾವನಿ ಕಲಿಯೋಣ' ದ ಪಾಠಗಳು ಒಂದು ಪುಟ್ಟ ಪ್ರಯತ್ನ.

ಈ ಪ್ರಯತ್ನದಲ್ಲಿ ನೀವು ನಮ್ಮೊಂದಿಗಿರಬೇಕು. ತಪ್ಪುಗಳಿದ್ದಲ್ಲಿ ಸರಿ ಪಡಿಸುವಲ್ಲಿ ನೆರವಾಗಬೇಕು.

ಇಲ್ಲಿಯ ಪಾಠಗಳ ವಿಶೇಷವೆಂದರೆ ಮರಾಠಿ/ಚಿತ್ಪಾವನಿ/ಕನ್ನಡ ಭಾಷಿಕರು ಚಿತ್ಪಾವನಿಯನ್ನು, ಜತೆಯಲ್ಲೇ ಮರಾಠಿಯನ್ನು ಕಲಿಯುವ ಪ್ರಯತ್ನ ಮಾಡಬಹುದು.

ಚಿತ್ಪಾವನೀ ಮ್ಹಣ್ಯೊ / ಚಿತ್ಪಾವನೀ ಭಾಷೆಯ ಗಾದೆಗಳು

ಪಾಠ ನಿಮಗಾಗಿ


ಚಿತ್ಪಾವನಿ -ಮರಾಠಿ ಭಾಷಾ ಪಾಠ - 1

ಪಾಠ ನಿಮಗಾಗಿ


ಚಿತ್ಪಾವನಿ ಮ್ಹಣ್ಯೊ (ಚಿತ್ಪಾವನಿ ನುಡಿಗಟ್ಟುಗಳು)

ಪಾಠ ನಿಮಗಾಗಿ


ಚಿತ್ಪಾವನಿ ಭಾಷೆ

ಪಾಠ ನಿಮಗಾಗಿ


ಚಿತ್ಪಾವನೀ-ಮರಾಠಿ ಭಾಷಾ ಪಾಠ -೨ (ಸಂವಾದ)

ಪಾಠ ನಿಮಗಾಗಿ