ನಾವು ಚಿತ್ಪಾವನರು


ಇತಿಹಾಸ

ಚಿತ್ಪಾವನರು ಪರ್ಷಿಯಾದಿಂದಲೋ, ಬರ್ಬರದಿಂದಲೋ ಗುಜರಾತದ ಆಸುಪಾಸಿನ ಕರಾವಳಿಗೆ ಬಂದು ಅಲ್ಲಿ ನೆಲೆಯಾದರು. ಇವರ ಒಳ ಪಂಗಡಗಳು ನಾಗರ, ತುರ್ಕಿ. ಉದೀಚ್ಯ ಬ್ರಾಹ್ಮಣರು. ಅಲ್ಲಿಂದ ಒಂದು ಗುಂಪು ಸಮುದ್ರಮಾರ್ಗವಾಗಿ ಕೊಂಕಣದ ಗುಹಾಗರ, ಚಿಪಳೂಣಗಳಿಗೆ ಬಂದು 'ಆರ್ಯಾವರ್ತ'ರೆನಿಸಿದರು. (ಆರ್ಯಾವರ್ತಾ ಇತಿಖ್ಯಾತಾ| ಆರ್ಯಾವರ್ತಾದುಪಾಗತಃ). ಚಿಪಳೂಣದಲ್ಲಿ ನೆಲೆಸಿ - ಚಿಪಳೋಣೆ - ಚಿತ್ಪಾವನರೆನಿಸಿಕೊಂಡರು. ಪ್ರಾಕೃತ ಮಹಾರಾಷ್ಟ್ರೀ ಭಾಷೆಯನ್ನು ಅಂಗೀಕರಿಸಿ, ಚಿತ್ಪಾವನಿ ಭಾಷೆ ರೂಪುಗೊಂಡಿತು.

ಮುಂದೆ ಓದಿ


ವಲಸೆ

ವ್ಯಾಪಕವಾದ ಅರ್ಥದಲ್ಲಿ 'ದೇಶ' ಎಂದರೆ ಘಟ್ಟದ ಮೇಲಣ ಪ್ರಸ್ಥಭೂಮಿ ಎಂದರ್ಥ. ಕೊಂಕಣದಿಂದ ದೇಶಕ್ಕೆ ಜೀವನೋಪಾಯಕ್ಕಾಗಿ ಜನ ಹೋದಾಗ 'ದೇಶಾವರ ಜಾಣೇ' (ದೇಶಕ್ಕೆ ಹೋಗುವುದು) ಎಂಬುದಾಗಿ ಬಂದಿರಬಹುದು. (ಕನ್ನಡ 'ದೇಶಾವರಿ'ಯೂ ಇದರಿಂದ ವ್ಯುತ್ಪನ್ನವಾಗಿರಬಹುದು) 'ದೇಶ'ದಲ್ಲಿದ್ದ ಬ್ರಾಹ್ಮಣರು ದೇಶಸ್ಥರು, 'ಕೊಂಕಣ'ದಿಂದ ಬಂದವರು ಕೋಕಣಸ್ಥರು. ಈ ಹೆಸರು ದಕ್ಷಿಣಕನ್ನಡದ ಚಿತ್ಪಾವನರಿಗೆ ಬಳಕೆ ಇಲ್ಲ. ಕಾರಣ, ಮಹಾರಾಷ್ರದಲ್ಲಿ ಈ ಪದ ಪ್ರಯೋಗ ಬಳಕೆಯಲ್ಲಿ ಬರುವ ಮೊದಲೇ ಚಿತ್ಪಾವನರು ಈ ಕಡೆ ವಲಸೆ ಬಂದಿದ್ದರು.

ಮುಂದೆ ಓದಿ


ಆಚಾರ - ವಿಚಾರ

ಚಿತ್ಪಾವನರು ಮೂಲಸ್ಥಳದ ಕುಲದೇವರನ್ನು ಹಿಂದಿನಂತೆಯೆ ಪಂಚಾಯತನ ಕ್ರಮದಿಂದ ಈಗಲೂ ಆರಾಧಿಸುತ್ತಿದ್ದೇವೆ. ಇಲ್ಲಿ ಇತರ ಬ್ರಾಹ್ಮಣರಿಗೂ ಚಿತ್ಪಾವನರಿಗೂ ಇರುವ ವ್ಯತ್ಯಾಸಗಳೆರಡು.
೧) ಪಂಚಾಯತನ ಪೂಜೆ
೨) ಸೋದರ ಮಕ್ಕಳ ವಿವಾಹ ನಿಷೇಧ

ಮುಂದೆ ಓದಿ


ದೇವಾಲಯಗಳು

ಪರಶುರಾಮನು ಚಿತ್ಪಾವನ ಸಮುದಾಯಕ್ಕೆ ಪ್ರಮುಖ ಆರಾಧ್ಯ ದೈವ. ಚಿತ್ಪಾವನರ ಪ್ರಮುಖ ವಸತಿ ತಾಣಗಳಲೆಲ್ಲ ಪರಶುರಾಮ ದೇವಸ್ಥಾನಗಳಿವೆ. ಪರಶುರಾಮ ಸೃಷ್ಟಿಯ ಕಥೆ, ಕರಾವಳಿಯಲ್ಲಿ ಇರುವ ಪರಂಪರಾಗತ ಜನಶ್ರುತಿಗಳೆಲ್ಲ ಪರಶುರಾಮನೆಂಬವನು ಕರಾವಳಿಗೆ ಬಂದ ಆದ್ಯ ವಲಸೆಗಾರರ ನಾಯಕನಾಗಿರಬೇಕೆಂಬ ಅಂಶಗಳನ್ನು ಸೂಚಿಸುತ್ತವೆ.

ಮುಂದೆ ಓದಿ