ಬೆಂಗಳೂರು ಚಿತ್ಪಾವನ ಸಮಾಜವು ಕಳೆದ ಒಂಭತ್ತು ವರ್ಷಗಳಿಂದ ಚಿತ್ಪಾವನ ಸಮುದಾಯದ ಪುರೋಭಿವೃದ್ಧಿ ಮತ್ತು ಲೋಕಕಲ್ಯಾಣಾರ್ಥವಾಗಿ ನಡೆಸಿಕೊಂಡು ಬರುತ್ತಿರುವ 'ಶರನ್ನವರಾತ್ರಿಯ ಶ್ರೀ ಚಂಡಿಕಾ ಹೋಮ'ದ ದಶಮಾನೋತ್ಸವ'ವು ಶ್ರೀ ಮನ್ಮಥನಾಮ ಸಂ||ರದ ಆಶ್ವಯುಜ ಶು|| ಚತುರ್ಥಿ, ಶನಿವಾರ ತಾ. 17-10-2015 ಮತ್ತು ಪಂಚಮಿ, ಭಾನುವಾರ ತಾ. 18-10-2015ರಂದು ಬೆಂಗಳೂರು ಶಂಕರಪುರಂನಲ್ಲಿರುವ ಶ್ರೀ ಚಂದ್ರಶೇಖರಭಾರತೀ ಕಲ್ಯಾಣ ಮಂಟಪ ಮತ್ತು ವಿದ್ಯಾವಿಹಾರಗಳ ಆವರಣದಲ್ಲಿ ಚಿತ್ಪಾವನ ಬಂಧುಗಳ ಸಕ್ರಿಯ ತೊಡಗಿಕೊಳ್ಳುವಿಕೆ ಮತ್ತು ತನು-ಮನ-ಧನಗಳ ಸಹಕಾರದಿಂದ ವೈಭವೋಪೇತವಾಗಿ ಸಂಪನ್ನಗೊಂಡಿತು.